ಬೆಂಗಳೂರು : ಜಾತಿಗಣತಿ ವರದಿ ವರದಿ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಸಿದ್ದರಾಮಯ್ಯರ ಮೇಲೆ ವಾಗ್ದಾಳಿ ನಡೆಸಿದ್ದು. ಸಿದ್ದರಾಮಯ್ಯ ಅCasrವರು ಕಾಂತರಾಜುನಾ ಮನೆಗೆ ಕರೆಸಿಕೊಂಡು ಡಿಕ್ಟೆಶನ್ ಮಾಡಿ ವರದಿ ಬರೆಸಿದ್ದಾರೆ. ಕಾಂತರಾಜು ಅರ್ಧಕ್ಕೆ ಬಿಟ್ಟು ಹೋಗಿದ್ದ. ಆದರೆ ಈಗ ವರದಿ ನೀಡಿದ್ದಾರೆ ಎಂದು ಹೇಳಿದರು.
ಜಾತಿ ಜನಗಣತಿ ವಿಚಾರ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದ್ದು. ಈ ಕುರಿತು ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಾಸಕ ಆರ್.ಅಶೋಕ್ ಸಿದ್ದರಾಮಯ್ಯರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಅಶೋಕ್ ‘ಜಾತಿ ಜನಗಣತಿಯಲ್ಲಿ ರಾಜ್ಯದಲ್ಲೇ ಮುಸ್ಲಿಂರೆ ನಂಬರ್ ಒನ್ ಎಂದು ವರದಿ ನೀಡಲಾಗಿದೆ. ಇದು ಕರ್ನಾಟಕದಲ್ಲಿ ಮಿನಿ ಪಾಕಿಸ್ತಾನಕ್ಕೆ ದಾರಿ ಮಾಡಿದೆ. ಮುಸ್ಲಿಂರಿಗೆ ಗುತ್ತಿಗೆ ಮೀಸಲಾತಿ ನೀಡಿದಾಗಲೇ ಗೊತ್ತಾಗಬೇಕಿತ್ತು. ಇವರು ಲಿಂಗಾಯತರಿಗೆ ಪಂಗನಾಮ ಹಾಕಿದ್ರು.ಗೌಡರಿಗೆ, ದಲಿತರಿಗೆ ನಾಮ ಹಾಕಿದ್ದಾರೆ.
ಇದನ್ನೂ ಓದಿ :ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗದ ಪತ್ನಿ, ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಕಿರಾತಕ
ಲಿಂಗಾಯತರನ್ನು ಭಾಗ ಭಾಗ ಮಾಡಿದ್ದಾರೆ. ಆದರೆ ಮುಸ್ಲಿಂಮರಲ್ಲೂ ಬೇರೆ ಬೇರೆ ಜಾತಿ ಇದೆ. ಅವರನ್ನು ಯಾಕೆ ಡಿವೈಡ್ ಮಾಡಿಲ್ಲ. ನಿಮಗೆ ಬೇಕಾದವರನ್ನು ಒಟ್ಟಿಗೆ ಇಟ್ಟುಕೊಂಡು, ಬೇಡದವರನ್ನು ಒಡೆಯುವ ಕೆಲಸ ಮಾಡುತ್ತಿದ್ದೀರ ಎಂದು ಆರ್. ಅಶೋಕ್ ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.