ಹುಬ್ಬಳ್ಳಿ : ಐದು ವರ್ಷದ ಬಾಲಕಿಯ ಮೇಲೆ ಸೈಕೋಪಾತವೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದು. ಮಗು ಕಿರುಚಾಡಿದ್ದಕ್ಕೆ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಘಟನೆಯನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮನುಷ್ಯ ಕುಲವೇ ತಲೆ ತಗ್ಗಿಸುವ ಹೇಯ ಕೃತ್ಯ ನಡೆದಿದ್ದು. ಮನೆ ಹೊರಗೆ ಆಟ ಆಡುವಾಗ ಐದು ವರ್ಷದ ಮಗುವಿನ ಅಪಹರಣ ಮಾಡಿ ಕೊಲೆ ಮಾಡಲಾಗಿದೆ. ಕುಡಿದ ಮತ್ತಿನಲ್ಲಿದ್ದ ಆಸಾಮಿಯೊಬ್ಬ ಅಂಗವೈಕಲ್ಯ ಹೊಂದಿದ್ದ 5 ವರ್ಷದ ಬಾಲಕಿಯನ್ನು ಅಪಹರಿಸಿದ್ದಾನೆ. ಅಪಹರಿಸಿ ಶೆಡ್ನತ್ತ ಹೊತ್ತೊಯ್ದಿದ್ದು. ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಇದನ್ನೂ ಓದಿ :ಸೌರಮಾನ ಯುಗಾದಿ ದಿನದಂದು ಈ ಕೆಲಸ ಮಾಡುವ ಮೂಲಕ ಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು
ಆದರೆ ಬಾಲಕಿ ಕಿರುಚಿಕೊಂಡಿದ್ದನ್ನು ಕೇಳಿಸಿಕೊಂಡ ಜನರು ಶೆಡ್ನತ್ತ ಬರುವುದನ್ನು ಗಮನಿಸಿದ ಆರೋಪಿ ಭಯದಿಂದ ಬಾಯಲಿಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬಿಹಾರ ಮೂಲದ ಸೈಕೋಪಾತ್ನಿಂದ ಈ ಹೇಯ ಕೃತ್ಯ ನಡೆದಿದ್ದು. ಸದ್ಯ ಮಗುವಿನ ಮೃತದೇಹ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಗೆ ಡಿಸಿಪಿ ರವೀಶ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಘಟನಾ ಸ್ಥಳಕ್ಕೆ ಅಶೋಕ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಆರೋಪಿ ಪತ್ತೆಗೆ 5 ವಿಶೇಷ ತಂಡ ರಚಿಸಿರುವುದಾಗಿ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ಇನ್ನು ಹುಬ್ಬಳ್ಳಿ ಹೊರವಲಯದ ಸಂಪೂರ್ಣ ವಲಯದಲ್ಲಿ ಪೊಲೀಸರ ಹದ್ದಿನ ಕಣ್ಣಿಟ್ಟಿದ್ದು. ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.