ಶ್ರೀನಗರ: ಜಮ್ಮುವಿನ ಅಖ್ನೂರ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ರಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಜೌರಿ ಜಿಲ್ಲೆಯ ಅಖ್ನೂರ್‌ನಲ್ಲಿ ಪಾಕ್ ನುಸುಳುಕೋರರನ್ನು ಹಿಮ್ಮೆಟ್ಟಿಸುವ ಪ್ರಯತ್ನದಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಕುಲ್‌ದೀಪ್ ಚಂದ್ ಹುತಾತ್ಮರಾಗಿದ್ದಾರೆ.
ಇದನ್ನೂ ಓದಿ :ಜೈಲಿಗೆ ಹೋಗಿ ಬಂದೋರು ಎಚ್ಚರಿಕೆ ಕೊಡುತ್ತಾರೆ; ದರ್ಶನ್ಗೆ ಟಾಂಗ್ ಕೊಟ್ಟ ಉಮಾಪತಿಗೌಡ
ಶುಕ್ರವಾರ ತಡರಾತ್ರಿ ಕೇರಿ ಭಟ್ಟಾಲ್‌ನ ಅರಣ್ಯ ಪ್ರದೇಶದ ಹೊಳೆ ಬಳಿ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪಿನ ಚಲನವಲನ ಗಮನಿಸಿದ್ದಾರೆ. ಕೂಡಲೇ ಎಚ್ಚೆತ್ತ ಸೇನಾ ಪಡೆದ ಅವರನ್ನು ಎದುರಿಸಲು ಮುಂದಾಗಿವೆ. ಈ ವೇಳೆ ಎರಡೂಕಡೆಯಿಂದ ತೀವ್ರ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಕುಲ್‌ದೀಪ್ ಚಂದ್ ಅವರಿಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ ಎಂದು ಉನ್ನತ ಸೇನಾಧಿಕಾರಿಗಳು ತಿಳಿಸಿದ್ದಾರೆ.