Monday, April 14, 2025

ಯತ್ನಾಳ್ ಹತ್ಯೆಗೆ ಸಂಚು, ಮತ್ತೊಂದು ವಿಡಿಯೋ ಬಹಿರಂಗ: Z ಕ್ಯಾಟಗರಿ ಭದ್ರತೆ ನೀಡಲು ಮೋದಿಗೆ ಮನವಿ

ವಿಜಯಪುರ : ಶ್ರೀರಾಮನವಮಿಯಂದು ಮಹಮ್ಮದ್​ ಪೈಗಂಬರ್​ ಬಗ್ಗೆ ಶಾಸಕ ಯತ್ನಾಳ್​  ಅವಹೇಳನಕಾರಿಯಾಗಿ ಮಾತನಾಡಿದ್ದಾನೆ ಎಂದು ಆರೋಪಿಸಿ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಿದ್ದು. ಯತ್ನಾಳ್​ ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎಂಬ ವಿಷಯ ಬಹಿರಂಗವಾಗಿದೆ. ಈ ಕುರಿತು ಮತ್ತೊಂದು ಸ್ಪೋಟಕ ವಿಡಿಯೋ ಬಹಿರಂಗವಾಗಿದೆ.

ಶಾಸಕ ಯತ್ನಾಳ್​ ವಿರುದ್ದ ಸಂಚು ರೂಪಿಸಿರುವ ಆಡಿಯೋವೊಂದು ನೆನ್ನೆ ಬಹಿರಂಗವಾಗಿತ್ತು. ಇದರ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಡಿಯೋ  ವೈರಲ್​ ಆಗಿದ್ದು. ದೊಡ್ಡ ಮಟ್ಟದ ಗಲಭೆಗೆ ಪ್ಲಾನ್ ನಡೆದಿದ್ದು. ಡಿಜೆ-ಕೆಜಿ ಹಳ್ಳಿ ಮಾದರಿಯಲ್ಲಿ ಗಲಭೆ ಸಂಚು ರೂಪಿಸಲಾಗಿದೆ. ಈ ಕುರಿತು ವಿಜಯಪುರದ ಮುಸ್ಲಿಂ ಯುವಕನೊಬ್ಬ ವಿಡಿಯೋ ಮಾಡಿದ್ದಾನೆ.

ಇದನ್ನೂ ಓದಿ :KSRTC ಬಸ್​​ನಲ್ಲಿ ಪ್ರಯಾಣಿಸಿ ಸರಳತೆ ಮೆರೆದ ಸಚಿವ ಕೃಷ್ಣಭೈರೇಗೌಡ

ವಿಜಯಪುರ ನಗರದ ಸೊಹೇಲ್ ಜರ್ತಾರ್ ಎಂಬಾತ ವಿಡಿಯೋ ಮಾಡಿದ್ದು. ಬಿಜಾಪುರ ಫೌಂಡೇಶನ್ ಹೆಸರಿನ ಇನ್‌ಸ್ಟಾಗ್ರಾಂ‌ನಲ್ಲಿ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ವಿಡಿಯೋದಲ್ಲಿ ಮಾತನಾಡಿರುವ ಯುವಕ ‘ನಮ್ಮ ಪ್ರವಾದಿಯನ್ನ ಟೀಕಿಸಿದನ್ನ ನಾವು ಸಹಿಸಿಕೊಳ್ಳಬಾರದು, ಎಲ್ಲ ಮುಸ್ಲಿಂರು ಒಗ್ಗಟ್ಟಾಗಬೇಕು, ಧರ್ಮಕ್ಕಾಗಿ ಎಲ್ಲರೂ ಒಂದಾಗಬೇಕು. ನಮ್ಮ ಹೋರಾಟ ಯತ್ನಾಳ್ ಎನ್ನುವ ಹುಳದ ವಿರುದ್ಧ. ಪ್ರವಾದಿಗಾಗಿ ನಮ್ಮ ಪ್ರಾಣ ಬಲಿಗಾಗಿ ಸಿದ್ಧವಿದೆ ಎಂದಿದ್ದಾನೆ. ಇದನ್ನೂ ಓದಿ : Viral Video : ಸೂಟ್​ಕೇಸ್​ನಲ್ಲಿ ಕುಳಿತುಕೊಂಡು ಬಾಯ್ಸ್​ ಹಾಸ್ಟೆಲ್​ಗೆ ಬಂದ ಯುವತಿ

ವಿಡಿಯೋ ಕೊನೆಯಲ್ಲಿ ಉರ್ದು ಭಾಷೆಯಲ್ಲಿ “ಗುಸ್ತಾಕಿ ನಬಿ ಕಾ ಏಕ್ ಹೀ ಸಜಾ ಸರ್ ತನ್ ಸೇ ಜುದಾ” ಎಂದಿದ್ದು. ಪ್ರವಾದಿ ವಿರುದ್ಧ ಮಾತನಾಡುವವನಿಗೆ ಒಂದೇ ಶಿಕ್ಷೆ ತಲೆ ಕತ್ತರಿಸೋದು ಎಂದಿದ್ದಾನೆ. ಇಂತಹ ವಿಡಿಯೋ, ಆಡಿಯೋ ಬಹಿರಂಗವಾಗುತ್ತಿದ್ದಂತೆ ಯತ್ನಾಳ್​ ಬೆಂಬಲಿಗರು ಅಲರ್ಟ್​ ಆಗಿದ್ದು. ಯತ್ನಾಳ್​ಗೆ Y+ ಅಥವಾ Z ಕ್ಯಾಟಗರಿ ಭದ್ರತೆ ನೀಡಲು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಯತ್ನಾಳ್​ ಹತ್ಯೆಗೆ ಸಂಚು ಮಾಡಿದವರ ಬಂಧನಕ್ಕೆ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES