ಬಾಗಲಕೋಟೆ : ಪ್ರೀತಿಸಿ ಮದುವೆಯಾಗಲು ಎಂದು ಸಬ್ ರಿಜಿಸ್ಟರ್ ಕಛೇರಿಗೆ ಬಂದಿದ್ದ ಪ್ರೇಮಿಗಳಿಗೆ ಪೋಷಕರು ಥಳಿಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು. ಅಂತರ್ಜಾತಿ ವಿವಾಹಕ್ಕೆ ಒಪ್ಪದ ಪೋಷಕರು ಯುವ ಜೋಡಿಗಳಿಗೆ ಥಳಿಸಿದ್ದಾರೆ.
ಬಾಗಲಕೋಟೆಯ, ಜಮಖಂಡಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಹೈಡ್ರಾಮಾ ನಡೆದಿದ್ದು. ಜಮಖಂಡಿಯ ಉಳ್ಳಾಗಡ್ಡಿ ಏರಿಯಾದ ಪ್ರೇಮಿಗಳಾದ ಗಾಣಿಗ ಸಮುದಾಯದ ಲಕ್ಷ್ಮೀ ಮತ್ತು ಮರಾಠಾ ಸಮುದಾಯದ ಅಪ್ಪಾಜಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಮದುವೆಗೆ ಯುವತಿಯ ಮನೆಯ ಪೋಷಕರು ಒಪ್ಪಿರಲಿಲ್ಲ. ಆದರೆ ಇದಕ್ಕೆ ಪ್ರತಿರೋಧ ತೋರಿಸಿದ್ದ ಯುವಪ್ರೇಮಿಗಳು ಇಂದು ಬೆಳ್ಳಿಗ್ಗೆ ಮದುವೆಯಾಗಲು ಎಂದು ಜಮಖಂಡಿಯ ಸಬ್ ರಿಜಿಸ್ಟರ್ ಕಚೇರಿಗೆ ಬಂದಿದ್ದರು.
ಇದನ್ನೂ ಓದಿ :BJP-AIADMK ಮೈತ್ರಿ; ಪಳನಿ ಸ್ವಾಮಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದ ಅಮಿತ್ ಶಾ
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಯುವತಿಯ ಪೋಷಕರು ಯುವಪ್ರೇಮಿಗಳಿಗೆ ಹಿಗ್ಗಾಮುಗ್ಗ ಥಳಿಸಿದ್ದು. ಸ್ಥಳೀಯ ತಹಶಿಲ್ದಾರ್ ಸದಾಶಿವ ಮುಕ್ಕೋಜಿ ಮುಂದೆಯೆ ಇಬ್ಬರಿಗೂ ಥಳಿಸಿದ್ದಾರೆ. ಘಟನೆಯಲ್ಲಿ ಯುವತಿಯ ಮೂಗಿಗ ಗಂಭೀರ ಹಾನಿಯಾಗಿದ್ದು. ಮೂಗಿನಿಂದ ರಕ್ತ ಸುರಿಯುತ್ತಿದ್ದರು, ಅದರ ಬಗ್ಗೆ ತಲೆಕೆಡೆಸಿಕೊಳ್ಳದ ಪೋಷಕರು ಯುವತಿಗೆ ನೀರು ಕುಡಿಸಿ ಎಳೆದೊಯ್ದಿದ್ದಾರೆ.
ಜಮಖಂಡಿ ಶಹರ್ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು. ಹಲ್ಲೆಗೊಳಗಾದ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.