Saturday, April 19, 2025

ಅಹಿಂಸ ಮಾರ್ಗ ಸಾರಿದ ಶ್ರವಣಬೆಳಗೊಳದಲ್ಲಿ ಜೈನಮುನಿಗಳನ್ನು ಸ್ವಾಗತಿಸುತ್ತಿವೆ ಮಾಂಸದ ಅಂಗಡಿಗಳು

ಹಾಸನ : ಜಗತ್ತಿಗೆ ಅಹಿಂಸ ತತ್ವವನ್ನು ಬೋದಿಸಿದ ಜೈನಕಾಶಿ ಶ್ರವಣ ಬೆಳಗೊಳದ ಪ್ರವೇಶ ದ್ವಾರದಲ್ಲಿ ಮಾಂಸದಂಗಡಿಗಳು ತಲೆ ಎತ್ತಿದ್ದು. ಇದಕ್ಕೆ ಶ್ರೀಕ್ಷೇತ್ರದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ಏ.12ರಂದು ಭಗವಾನ್​ ಶ್ರೀ 1008 ನೇಮನಾಥ ತೀರ್ಥಂಕರರ ಪಂಚಕಲ್ಯಾಣ ಹಾಗೂ ಮಹಾರಥೋತ್ಸವ ನಡೆಯಲಿದ್ದು. ಮಾ.31 ರಿಂದಲೇ ವಿವಿಧ ಕಾರ್ಯಕ್ರಮಗಳು ಆರಂಭವಾಗಿವೆ. ಏ.12 ರಂದು ರಾತ್ರಿ 8 ಗಂಟೆಗೆ ಶ್ರೀ ಮಠದ ಬಸದಿಯಲ್ಲಿ ಶ್ರೀ ಕೂಷ್ಮಾಂಡಿನಿ ದೇವಿಗೆ ಮಹಾ ಮಂಗಳಾರತಿ ನಡೆಯಲಿದ್ದು. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರು, ಸರ್ಕಾರದ ಹಲವು ಸಚಿವರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ :ಬಿಹಾರ ಚುನಾವಣೆ ಸಮಯದಲ್ಲಿ ರಾಣನನ್ನು ಗಲ್ಲಿಗೆ ಹಾಕುತ್ತಾರೆ; ಸಂಜಯ್​ ರಾವತ್​

ಆದರೆ ಶ್ರವಣ ಬೆಳಗೊಳ ಪ್ರವೇಶಿಸುವ ಪ್ರವೇಶದ್ವಾರಗಳಲ್ಲಿ ಮಾಂಸದಂಗಡಿಗಳು ತೆರೆದಿದ್ದು. ಇದಕ್ಕೆ ಸ್ವಸ್ತಿಶ್ರೀಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಗತ್ತಿಗೆ ಅಹಿಂಸ ತತ್ವವನ್ನು ಬೋಧಿಸಿದ ಸ್ಥಳಕ್ಕೆ ಬರುವ  ಯಾತ್ರಾರ್ಥಿಗಳು, ಮುನಿಗಳು, ತ್ಯಾಗಿಗಳನ್ನು ಮಾಂಸದ ಅಂಗಡಿಗಳು ಸ್ವಾಗತಿಸುತ್ತಿವೆ. ಈ ದೃಷ್ಯ ಪವಿತ್ರ ಕ್ಷೇತ್ರಕ್ಕೆ ಬರುವವರಿಗೆ ಮುಜುಗರದ ವಾತವರಣವನ್ನು ಸೃಷ್ಟಿಸಿದ್ದು. ರಾಜ್ಯ, ದೇಶ, ವಿದೇಶಗಳಿಂದ ಬರುವ ಯಾತ್ರಿಕರಿಗೆ ಮುಜುಗರ ಉಂಟು ಮಾಡಿವೆ.

ಶ್ರವಣಬೆಳಗೊಳ ಪ್ರವೇಶಿಸುವ ಪ್ರಮುಖ ರಸ್ತೆ, ವೃತ್ತಗಳಲ್ಲೇ ಮಾಂಸದಂಗಡಿಗಳಿದ್ದು. ಕುರಿ, ಕೋಳಿಗಳನ್ನು ವಧೆಮಾಡಿ ನೇತು ಹಾಕಿದ್ದಾರೆ. ಗೊಮ್ಮಟೇಶ್ವರನ ದರ್ಶನಕ್ಕೆ ಬರುವ ಜೈನ ಮುನಿಗಳು, ಯಾತ್ರಾರ್ಥಿಗಳು ಮೊದಲು ಮಾಂಸದಂಗಡಿಗಳ ದರ್ಶನ ಮಾಡಿ ನಂತರ ಬಾಹುಬಲಿ ದರ್ಶನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ :ವಾರಣಾಸಿ ಗ್ಯಾಂಗ್ ರೇಪ್: ಏರ್‌ಪೋರ್ಟಲ್ಲೇ ಪೊಲೀಸರಿಂದ ಮಾಹಿತಿ ಪಡೆದ ಪ್ರಧಾನಿ ಮೋದಿ

ಕಠಿಣ ವ್ರತಾಚರಣೆ ಮಾಡುವ ದಿಗಂಬರ ಮುನಿಗಳು ಮಾಂಸ ಕಣ್ಣಲ್ಲಿ ಕಂಡರೆ ಅಂದು ಇಡೀ ದಿನ ಯಾವುದೇ ಆಹಾರ ಸೇವಿಸದೆ ಉಪವಾಸ ವ್ರತ ಆಚರಿಸುತ್ತಾರೆ. ಅಪರೂಪಕ್ಕೆ ಬರುವ ದಿಗಂಬರ ಮುನಿಗಳಿಗೆ ಊಟೋಪಚಾರ ಮಾಡಿಸಿ ಸತ್ಕರಿಸುವ ಭಾಗ್ಯ ಶ್ರವಣಬೆಳಗೊಳ ಮಠಕ್ಕೆ ಸಿಗದಂತಾಗಿದೆ. ಮಾಂಸದಂಗಡಿಗಳನ್ನು ಸ್ಥಳಾಂತರಿಸುವಂತೆ ಈ ಮುನ್ನ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಅವರ ಆದೇಶಕ್ಕೂ ಮಾಂಸದಂಗಡಿ ಮಾಲೀಕರು ಡೋಂಟ್​ಕೇರ್ ಎನ್ನುತ್ತಿದ್ದಾರೆ.

ಕಳೆದ ಐದು ತಿಂಗಳ ಹಿಂದೆ ತಹಶಿಲ್ದಾರ್​ ಮಾಂಸದ ಅಂಗಡಿ ತೆರವುಗೊಳಿಸುವಂತೆ ಆದೇಶಿಸಿದ್ದರು. ಇನ್ನು ಕ್ರಮ ಆಗಿಲ್ಲ. ಈ ಕುರಿತು ಸ್ಥಳೀಯ ಶಾಸಕರು ಕ್ರಮ ಕೈಗೊಳುತ್ತಿಲ್ಲ ಎಂದು ಶ್ರೀ ಮಠದ ಸ್ವಾಮಿಜಿಗಳು ಹೇಳಿದ್ದಾರೆ. ಈ ಕ್ಷೇತ್ರವನ್ನು ಅಹಿಂಸಾ ಕ್ಷೇತ್ರವನ್ನಾಗಿ ಘೋಷಣೆ ಮಾಡುವಂತೆ ಶ್ರೀ ಮಠದ ವತಿಯಿಂದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಗೂ ಮನವಿ ಮಾಡಲಾಗಿದೆ. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುತ್ತೇವೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES