ಭಾರತದ ಮೋಸ್ಟ್ ವಾಂಟೆಡ್ ಉಗ್ರ ತಹವ್ವೂರ್ ರಾಣ ಹಸ್ತಾಂತರ ರಾಜಕೀಯ ಸ್ವರೂಪ ಪಡೆಯುತ್ತಿದ್ದು. ವಿಪಕ್ಷಗಳು ಮೋದಿ ಸರ್ಕಾರದ ವಿರುದ್ದ ಮುಗಿ ಬಿದ್ದಿವೆ. ಮೋದಿ ಸರ್ಕಾರ ರಾಣಾ ಹಸ್ತಾಂತರದ ಕ್ರೆಡಿಟ್ ಪಡೆಯಲು ಯತ್ನಿಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಇದರ ನಡುವೆ ಉದ್ದವ ಬಣದ ಶಿವಸೇನೆ ನಾಯಕ ಸಂಜಯ್ ರಾವತ್ ಮತ್ತೊಂದು ಹೇಳಿಕೆ ನೀಡಿದ್ದು. ಬಿಹಾರ್ ಚುನಾವಣೆ ಸಮಯದಲ್ಲಿ ಮೋದಿ ಸರ್ಕಾರ ರಾಣನನ್ನು ಗಲ್ಲಿಗೆ ಹಾಕಲಿದೆ ಎಂದು ಹೇಳಿದ್ದಾರೆ.
ಈಗಾಗಲೇ ರಾಣಾನನ್ನ ನ್ಯಾಯಲಯದ ಮುಂದೆ ಹಾಜರು ಪಡಿಸಿದ್ದು. ನ್ಯಾಯಾಲಯ 18 ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳದ (NIA) ಕಸ್ಟಡಿಗೆ ನೀಡಿದೆ, ಎನ್‌ಐಎ ಮುಂದಿನ ವಿಚಾರಣೆ ಕೈಗೊಂಡಿದೆ. ದೇಶದ ಹಲವು ಭಾಗಗಳಿಗೆ ರಾಣಾನನ್ನ ಕರೆದೊಯ್ಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ರಾಜಕೀಯ ಜಟಾಪಟಿಯೂ ನಡೆದಿದೆ.
ಇದನ್ನೂ ಓದಿ :ಪವನ್ ಕಲ್ಯಾಣ ಪುತ್ರನ ಬಗ್ಗೆ ಮಾಹಿತಿ ಹಂಚಿಕೊಂಡ ಚಿರಂಜೀವಿ
ಶಿವಸೇನಾ ಸಂಸದ ಸಂಜಯ್ ರಾವತ್ ಈ ಕುರಿತು ಹೇಳಿಕೆ ನೀಡಿದ್ದ. ರಾಣನನ್ನು ತಕ್ಷಣವೇ ಗಲ್ಲಿಗೇರಿಸಬೇಕು. ಆದರೆ ಮೋದಿ ಸರ್ಕಾರ ಬಿಹಾರ ಚುನಾವಣೆಯ ಸಮಯದಲ್ಲಿ ಆತನನ್ನು ಗಲ್ಲಿಗೆ ಹಾಕಲಿದೆ ಎಂದು ಹೇಳಿದ್ದಾರೆ. ಪರೋಕ್ಷವಾಗಿ ಬಿಜೆಪಿ ರಾಣಾನನ್ನು ಗಲ್ಲಿಗೆ ಹಾಕಿ ಚುನಾವಣೆಯಲ್ಲಿ ಲಾಭ ಪಡೆಯಲಿದೆ ಎಂದು ಹೇಳಿದ್ದಾರೆ.
ನಿನ್ನೆ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ತಹವ್ವೂರ್ ರಾಣ ಹಸ್ತಾಂತರದ ಕ್ರೆಡಿಟ್ ಪಡೆಯಲು ಯತ್ನಿಸುತ್ತಿದೆ. ಆದರೆ ಆತನ ಹಸ್ತಾಂತರ ಪ್ರಕ್ರಿಯೆಯನ್ನು ನಮ್ಮ ಕಾಲದಲ್ಲೇ ಆರಂಭಿಸಿದ್ದೇವು. ಆದರೆ ಇದರ ಲಾಭವನ್ನು ಮೋದಿ ಸರ್ಕಾರ ಪಡೆಯುತ್ತಿದೆ ಎಂದು ಹೇಳಿದರು.