ವಿಜಯಪುರ : ಮಹಮ್ಮದ್ ಪೈಗಂಬರ್ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಳ್ ಅವಹೇಳನಕಾರಿ ಹೇಳಿಕೆ ಕುರಿತು ಕಿಡಿಗೇಡಿ ಯುವಕನೊಬ್ಬ ಆಡಿಯೋ ಹರಿಬಿಟ್ಟಿದ್ದು. “ಈ ಬಾರಿ ಯತ್ನಾಳ್ಗೆ ಫೈನಲ್ ಡೇ, ಆತ ಅರೆಸ್ಟ್ ಆಗಬೇಕು ಅಥವ ಆತನ ತಲೆಯನ್ನು ಕತ್ತರಿಸಬೇಕು ಎಂಬ ಪ್ರಚೋದನಕಾರಿ ಆಡಿಯೋವೊಂದನ್ನು ಹರಿಬಿಟ್ಟಿದ್ದಾನೆ.
ಹುಬ್ಬಳ್ಳಿಯ ಬಾನಿ ಓಣಿಯಲ್ಲಿ ನಡೆದಿದ್ದ ರಾಮನವಮಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಯತ್ನಾಳ್. ಈ ಕಾರ್ಯಕ್ರಮದಲ್ಲಿ ಪೈಗಂರ್ಗೆ ಅವಹೇಳನಕಾರಿಯಾದ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಇದರ ವಿರುದ್ದ ಗೋಲ್ಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಆದರೆ ಇದೀಗ ಯತ್ನಾಳ್ ವಿರುದ್ದ ಇದೇ 15 ರಂದು ಮೋರ್ಚ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ರಾಡ್ನಿಂದ ಹೊಡೆದು ಹೆತ್ತ ತಾಯಿಯನ್ನೆ ಕೊ*ಲೆ ಮಾಡಿದ ಮಗ
ಈ ಕುರಿತು ಆಡಿಯೋ ಮಾಡಿರುವ ಯುವಕ ‘ ವಿಜಯಪುರದಲ್ಲಿ ನಡೆದ NMC ಸಭೆಯಲ್ಲಿ ಮುಸ್ಲಿಂ ಮುಖಂಡರು, ಉಲ್ಮಾಗಳು ಸೇರಿ ಸಭೆ ಮಾಡಲಾಗಿದೆ. ಪೈಗಂಬರ್ ವಿರುದ್ದ ಮಾತನಾಡಿದ ಯತ್ನಳ್ ಮನೆಗೆ ರ್ಯಾಲಿ ಮಾಡಬೇಕು. ಅದಕ್ಕಾಗಿ ಜನರನ್ನು ಸೇರಿಸಬೇಕು. ಅಂಬೆಡ್ಕರ್ ಸರ್ಕಲ್ನಿಂದ ಹೊರಡುವ ರ‍್ಯಾಲಿ, ಅಲ್ಲಿಂದ ಯತ್ನಾಳ್ ಮನೆ ಕಡೆಗೆ ನುಗ್ಗಬೇಕು. ಈ ರ‍್ಯಾಲಿಗೆ ಬರುವವರು ನಿಮ್ಮ ಗೆಳಯರನ್ನು ಕರೆದುಕೊಂಡು ಬನ್ನಿ ಎಂದು ಕರೆ ನೀಡಲಾಗಿದೆ.
ಇದನ್ನೂ ಓದಿ :ಬೊಲೆರೋ ವಾಹನ ಹಾಗೂ ಸಾರಿಗೆ ಬಸ್ ನಡುವೆ ಭೀಕರ ಅಪಘಾತ; ಒಂದೇ ಗ್ರಾಮದ ನಾಲ್ವರು ಸಾ*ವು
ಮುಂದುವರಿದು ಆಡಯೋದಲ್ಲಿ ಮಾತನಾಡಿರುವ ಯುವಕ “ಈ ಬಾರಿ ಯತ್ನಾಳ್ಗೆ ಪೈನಲ್ ಡೇ, ಈ ಬಾರಿ ಆತ ಅರೆಸ್ಟ್ ಆಗಬೇಕು ಇಲ್ಲ, ಆತನ ತಲೆಯನ್ನ ಕತ್ತರಿಸಬೇಕು..ಸರ ತನ್ ಸೇ ಜುದಾ ಎಂದು ಆಡಿಯೋದಲ್ಲಿ ಉಲ್ಲೇಖವಾಗಿದೆ. ಈ ಕಾರ್ಯಕ್ಕೆ ಇಲ್ಲರು ತಯಾರಾಗಿ. ಈಗಾಗಲೇ ಮುಸ್ಲಿಂಮರು ಇದನ್ನು ನಿರ್ಧರಿಸಿದ್ದಾರೆ. 15ನೇ ತಾರೀಕು ಯತ್ನಾಳ್ಗೆ ಫೈನಲ್ ಡೇ, ಅಂದು ಯತ್ನಾಳ್ ನೇರವಾಗಿ ಜಹಾನತ್ಗೆ ಹೋಗ್ತಾನೆ. ಈ ಕುರಿತು ಉಲ್ಮಾಗಳು. ಮುಸ್ಲಿಂ ಮುಖಂಡರು, ಸದಸ್ಯರು ನಿರ್ಧರಿಸಿದ್ದಾರೆ ಎನ್ನಲಾಗಿದೆ.ಇದೀಗ ಈ ಆಡಿಯೋ ವಿಜಯಪುರದಲ್ಲಿ ಆತಂಕ ಸೃಷ್ಟಿಸಿದೆ