ಬೆಂಗಳೂರು : ಕ್ರೂರಿ ಮಗನೊಬ್ಬ ಹೆತ್ತತಾಯಿಯನ್ನೆ ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಮೃತ ಮಹಿಳೆಯನ್ನು 82 ವರ್ಷದ ಶಾಂತಬಾಯಿ ಎಂದು ಗುರುತಿಸಲಾಗಿದೆ. ತಾಯಿಯನ್ನೇ ಕೊಲೆ ಮಾಡಿ ಪರಾರಿಯಾಗಿರುವ ಕ್ರೂರಿ ಮಗನನ್ನು 52 ವರ್ಷದ ಮಹೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ.
ಬೆಂಗಳೂರಿನ, ಬಾಗಲಗುಂಟೆಯ ಮುನೇಶ್ವರ ನಗರದಲ್ಲಿ ಘಟನೆ ನಡೆದಿದ್ದು. ಕ್ರೂರಿ ಮಗ ಮಹೇಂದ್ರ ಸಿಂಗ್ ಕುಡಿತದ ಚಟಕ್ಕೆ ಬಿದ್ದಿದ್ದನು. ಯಾವುದೇ ಕೆಲಸ ಮಾಡದೇ, ಕುಡಿದು ಅಲೆಯುತ್ತಿದ್ದನು. ನಿತ್ಯವೂ ಹಣಕ್ಕಾಗಿ ತಾಯಿಯ ಬಳಿ ಪೀಡಿಸುತ್ತಿದ್ದನು ಎಂದು ತಿಳಿದು ಬಂದಿದ್ದು. ಇದೇ ಕಾರಣಕ್ಕೆ ಕೊಲೆ ಮಾಡಿಲಾಗಿದೆ ಎಂದು ಶಂಕಿಸಲಾಗಿದೆ.
ಇದನ್ನೂ ಓದಿ :ಬೊಲೆರೋ ವಾಹನ ಹಾಗೂ ಸಾರಿಗೆ ಬಸ್ ನಡುವೆ ಭೀಕರ ಅಪಘಾತ; ಒಂದೇ ಗ್ರಾಮದ ನಾಲ್ವರು ಸಾ*ವು
ಘಟನೆ ಸಂಬಂಧ ಆರೋಪಿ ಮಹೇಂದ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದು. ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.