ಉಡುಪಿ : ಕೃಷ್ಣಮಠ ರಥ ಬೀದಿಯಲ್ಲಿ ಇನ್ಮುಂದೆ ಫ್ರಿ ವೆಡ್ಡಿಂಗ್ ಶೂಟ್ಗೆ ಅವಕಾಶವನ್ನು ನಿಷೇಧಿಸಲಾಗಿದೆ. ವೆಡ್ಡಿಂಗ್ ಶೂಟ್ ನೆಪದಲ್ಲಿ ಮಠದ ಆವರಣದಲ್ಲಿ ಅಸಭ್ಯ ವರ್ತನೆ ತೋರಲಾಗುತ್ತಿದೆ ಎಂಬ ಆರೋಪವಿದ್ದು. ಇದಕ್ಕೆ ಬ್ರೇಕ್ ಹಾಕಲು ಇಂತಹ ನಿರ್ಧಾರ ಕೈಗೊಳ್ಳಲಾಗಿದೆ.
ಫ್ರಿ ವೆಡ್ಡಿಂಗ್ ಶೂಟ್ ಇಂದಿನ ಯುವ ಜೋಡಿಗಳಿಗೆ ಆಕರ್ಷಣೆಯ ವಿಷಯವಾಗಿದೆ. ಇದೇ ಕಾರಣಕ್ಕೆ ಪ್ರವಾಸಿ ತಾಣಗಳು ಪೋಟೋಶೂಟ್ ಸ್ಥಳಗಳಾಗಿ ಬದಲಾಗುತ್ತಿದೆ. ಅದೇ ರೀತಿ ಉಡುಪಿಯ ಕೃಷ್ಣ ಮಠ ಆವರಣದಲ್ಲಿಯೂ ಪೋಟೋಗ್ರಾಫರ್ಗಳ ಹಾವಳಿ ಹೆಚ್ಚಾಗಿದ್ದು. ಪೋಟೋಶೂಟ್ ಹೆಸರಲ್ಲಿ ಬೆಳ್ಳಂಬೆಳಿಗ್ಗೆ ಮಠದ ಆವರಣದಲ್ಲಿ ಅಸಭ್ಯ ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ :ಸೋಫ ನೀಡದೆ ದಲಿತ ನಾಯಕ ಖರ್ಗೆಗೆ ಗಾಂಧಿ ಕುಟುಂಬ ಅವಮಾನ ಮಾಡಿದೆ; ಸುನೀಲ್ ಕುಮಾರ್
ಕೇರಳ, ಬೆಂಗಳೂರು ಕಡೆಯಿಂದ ಬರುವ ಫೋಟೋಗ್ರಾಫರ್ಗಳು ಪೋಟೋಶೂಟ್ ಹೆಸರಲ್ಲಿ ಕೃಷ್ಣಮಠದ ಆವರಣದಲ್ಲಿ ಪ್ರೇಮಸಲ್ಲಾಪದಲ್ಲಿ ತೊಡಗುತ್ತಿದ್ದು. ಅಷ್ಟಮಠಾದೀಶರು, ಯತಿಗಳು, ದಾಸರು ಓಡಾಡುವ ಬೀದಿಯಲ್ಲಿ ಮುಜುಗರದ ಸನ್ನಿವೇಶ ತಪ್ಪಿಸಲು ಇಂತಹ ನಿರ್ಧಾರ ಕೈಗೊಳ್ಳಲಾಗಿದೆ.
ಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠ ಇಂತಹ ನಿರ್ಧಾರ ಕೈಗೊಂಡಿದ್ದು. ಧಾರ್ಮಿಕ ಸ್ಥಳದಲ್ಲಿ ಮುಜಯಗರದ ಸನ್ನಿವೇಶ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.