ಉತ್ತರ ಪ್ರದೇಶ: ಹೆಣ್ಣು ನೋಡಲು ಎಂದು ಭಾವಿ ಅತ್ತೆಯ ಮನೆಗೆ ಬಂದಿದ್ದ ಯುವಕನಿಗೆ ಹುಡುಗಿಯ ಅತ್ತೆಯ ಮೇಲೆ ಪ್ರೀತಿಯಾಗಿದ್ದು. ಮದುವೆಗೆ ಇನ್ನೇನು 9 ದಿನಗಳು ಬಾಕಿ ಇರುವಾಗ ವಧುವಿನ ತಾಯಿಯನ್ನು ಓಡಿಸಿಕೊಂಡು ಹೋಗಿರುವ ಘಟನೆ ಉತ್ತರಪ್ರದೇಶದ ಅಲಿಗಢದಲ್ಲಿ ನಡೆದಿದೆ.
ಹೆಣ್ಣು ನೋಡಲು ಬಂದಿದ್ದ ವರನಿಗೆ ತನ್ನ ಭಾವಿ ಅತ್ತೆಯ ಮೇಲೆ ಪ್ರೀತಿಯಾಗಿತ್ತು ಎನ್ನಲಾಗಿದ್ದು. ಅವರಿಬ್ಬರ ನಡುವಿನ ಸಂಬಂಧದ ಬಗ್ಗೆ ಯಾರಿಗು ತಿಳಿದಿರಲಿಲ್ಲ. ವರನೊಂದಿಗೆ ಪರಾರಿಯಾಗುವಾಗ ವಧುವಿನ ತಾಯಿ, ಮಗಳ ಆಭರಣಗಳು ಮತ್ತು ಮದುವೆಗಾಗಿ ಉಳಿಸಿದ್ದ ಹಣವನ್ನೂ ತೆಗೆದುಕೊಂಡು ಹೋಗಿದ್ದಾಳೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಪರಾರಿಯಾಗಿರುವ ಮಹಿಳೆಯ ಮಗಳ ಮದುವೆ ಯುವಕನೊಂದಿಗೆ ನಿಶ್ಚಯವಾಗಿತ್ತು. ಇದೇ ಏಪ್ರಿಲ್ 16ರಂದು ಇಬ್ಬರಿಬ್ಬರ ನಡುವೆ ಮದುವೆ ನಡೆಯಬೇಕಿತ್ತು, ಮದುವೆಯ ಸಿದ್ದತೆಯ ನೆಪದಲ್ಲಿ ಯುವಕ ಆಗ್ಗಾಗ್ಗೆ ಇವರ ಮನೆಗೆ ಬರುತ್ತಿದ್ದ. ಈ ವೇಳೆ ಇಬ್ಬರ ನಡುವೆ ಪ್ರೀತಿಯಾಗಿದೆ. ಇದರ ನಡುವೆ ಯುವಕ ತನ್ನ ಭಾವಿ ಅತ್ತೆಗೆ ಮೊಬೈಲ್ ಫೋನ್ ಉಡುಗೊರೆಯಾಗಿ ನೀಡಿದ್ದನು. ಆದರೆ ಇದನ್ನು ತಾಯಿ ಮತ್ತು ಮಗನ ನಡುವೆ ಇರುವ ಬಾಂದವ್ಯ ಅಂತ ಎಲ್ಲರೂ ಭಾವಿಸಿದ್ದರು.
ಇದನ್ನೂ ಓದಿ :ಹಣ, ನೌಕರಿಯ ಆಮಿಷವೊಡ್ಡಿ ಅನ್ಯಧರ್ಮಿಯರಿಂದ ಮತಾಂತರಕ್ಕೆ ಯತ್ನ
ಮದುವೆ ದಿನ ಹತ್ತಿರವಾಗುತ್ತಿದ್ದಂತೆ ಶಾಪಿಂಗ್ಗೆ ಎಂದು ಅತ್ತೆ ಮತ್ತು ಅಳಿಯ ಇಬ್ಬರು ಮನೆಯಿಂದ ಹೊರಟ್ಟಿದ್ದು. ಮನೆಯಿಂದ ಹೋದವರು ತಿರುಗಿ ಮನೆಗೆ ವಾಪಾಸಾಗಿಲ್ಲ. ಕುಟುಂಬಸ್ಥರು ಇಬ್ಬರನ್ನು ಮೊಬೈಲ್ ಮೂಲಕ ಸಂಪರ್ಕ ಮಾಡಲು ಯತ್ನಿಸಿದ್ದು. ಅದು ಕೂಡ ಪ್ರಯೋಜನವಾಗಿಲ್ಲ. ನಂತರ ಅನುಮಾನಗೊಂಡ ಹುಡುಗಿಯ ತಂದೆ ಮನೆಯ ಬೀರು ಪರಿಶೀಲಿಸಿದ್ದು. ಚಿನ್ನ ಮತ್ತು ಹಣ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಅಲ್ಲಿಗೆ ಇಬ್ಬರು ಓಡಿ ಹೋಗಿದ್ದಾರೆಂಬುದು ಖಚಿತವಾಗಿದೆ. ಈ ವಿಷಯ ಸದ್ಯ ಪಟ್ಟಣಾದ್ಯಂತ ಚರ್ಚೆಗೆ ಗ್ರಾಸವಾಗಿದೆ