ಈ ಮೆಟ್ರೋ ಟ್ರೈನ್ ಒಳಗಡೆ ಇನ್ನೇನು ವೇಷ ನೋಡ್ಬೇಕೋ.. ಮೇಕಪ್ ಆಯಿತು.. ಡಾನ್ಸ್ ಆಯಿತು ಪ್ರೇಮಿಗಳ ಕುಚ್ ಕುಚ್ ಬಾತ್ ಆಯಿತು.. ರೀಲ್ಸ್ ಆಯಿತು.. ಸೀಟ್ಗಾಗಿ ಹೊಡೆದಾಡಿಕೊಂಡಿದ್ದು ಆಯಿತು.. ಕೊನೆಗೆ ಇದೊಂದು ಬಾಕಿ ಇತ್ತು ನೋಡಿ.. ಟ್ರೈನ್ ಒಳಗಡೆ ಎಣ್ಣೆ ಹೊಡಿತಿದ್ದಾನೆ ಈ ಭೂಪ.. ಬಾರ್ಗೆ ಹೋಗಿ ಟೈಮ್ ವೇಸ್ಟ್ ಮಾಡೋದಕ್ಕೀಂತ ಟ್ರೈನ್ನಲ್ಲಿ ಹೋಗ್ತಾನೆ ಎಣ್ಣೆ ಹಾಕ್ಕೊಂಡ್ರೆ ಹೇಗೆ ಅನ್ನೋ ಯೋಚನೆ ಬಂದಿದ್ದೆ ತಡ ಈ ಭೂಪ ಆಫೀಸ್ ಕೆಲಸಿ ಮನೆಗೆ ಹೋಗುವಾಗ ಆರಾಮಾಗಿ ಕೂತು ಗ್ಲಾಸ್ಗೆ ಎಣ್ಣೆ ಬಗ್ಗಿಸಿಕೊಂಡು ಬೇಯಿಸಿದ ಮೊಟ್ಟೆ ಜೊತೆ ಗುಂಡು ಹಾಕ್ತಿದ್ದಾನೆ.
ಇತ್ತೀಚಿನ ದಿನಗಳಲ್ಲಿ ಈ ಮೆಟ್ರೋ ರೈಲು ಒಂದಲ್ಲ ಒಂದು ವಿವಾದಗಳಿಂದಲೆ ಸುದ್ದಿಯಲ್ಲಿದೆ. ರೀಲ್ಸ್ ಹುಚ್ಚರು ರೀಲ್ಸ್ ಮಾಡುತ್ತಾ ಕಿರಿಕ್ ಶುರು ಹಚ್ಕೊಂಡಿದ್ದರೆ ಇನ್ನು ಕೆಲವರು ಸೀಟ್ಗಾಗಿ ಜಟಾಪಟಿ ಮಾಡಿರುವಂತಹ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಣೋದಕ್ಕೆ ಸಿಗುತ್ತವೆ ಇನ್ನು ಕೆಲವರು ಮೆಟ್ರೋ ರೈಲಿನೊಳಗಡೆನೆ ಬರ್ತ್ ಡೇ ಸಿಲೆಬ್ರೇಶನ್ ಮಾಡ್ಕೊಂಡಿರೋ ಸುದ್ದಿ ಕೂಡ ಸದ್ದು ಮಾಡಿತ್ತು.
ಇದನ್ನೂ ಓದಿ :ಕಾಲೇಜಿಗೆ ಹೋಗು ಎಂದು ಬೈದಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ
ಮೆಟ್ರೋ ರೈಲಿನಲ್ಲಿ ಕುಡುಕರು ಕುಡಿದು ರಂಪಾಟ ಮಾಡಿದ್ರು ವಿನಃ ಮೆಟ್ರೋ ರೈಲಿನೊಳಗಡೆ ಕುಡಿಯೋ ಮಟ್ಟಿಗೆ ಮುಂದುವರಿದಿರಲಿಲ್ಲ.. ಇದೀಗ ಅದು ನಡೆದಿದೆ. ಈ ಘಟನೆ ದೆಹಲಿ ಮೆಟ್ರೋ ರೈಲಿನೊಳಗಡೆ ನಡೆದಿದ್ದು, ಇಲ್ಲೊಬ್ಬ ಭೂಪ ರಾತ್ರಿ ಸಂಚಾರದ ಸಮಯದಲ್ಲಿ ಸೀಟ್ನಲ್ಲಿ ಆರಾಮಾಗಿ ಕೂತು ಗ್ಲಾಸ್ಗೆ ಎಣ್ಣೆ ಹಾಕಿದ್ದಾನೆ
ಎರಡು ಸಿಪ್ ಕುಡಿದು ಬ್ಯಾಗ್ನೊಳಗಡೆಯಿಂದ ಬೇಯಿಸಿದ ಮೊಟ್ಟೆ ತೆಗೆದು ಸಿಪ್ಪೆ ಸುಲಿದು ಎಣ್ಣೆ ಜೊತೆ ಮೊಟ್ಟೆ ತಿನ್ನುತ್ತಾ ಆರಾಮಾಗಿ ಪ್ರಯಾಣ ಮಾಡ್ತಿದ್ದಾನೆ. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಪ್ರಯಾಣದ ಸಂದರ್ಭದಲ್ಲಿ ಈ ರೀತಿ ಗುಂಡು ಹೊಡೆಯುವುದು ತಪ್ಪು ಅಂತ ಗೊತ್ತಿದ್ದರೂ ಕೂಡ ಈತ ನಿಯಮವನ್ನು ಉಲ್ಲಂಘಿಸಿ ಆರಾಮಾಗಿ ಕೂತು ಎಣ್ಣೆ ಹೊಡೆದಿದ್ದಾನೆ.. ಈತ ಎಣ್ಣೆ ಹೊಡೆಯುವ ಈ ದೃಶ್ಯವನ್ನು ಸಹ ಪ್ರಯಾಣಿಕರು ತಮ್ಮ ಮೊಬೈಲ್ ಕ್ಯಾಮಾರದಲ್ಲಿ ಸೆರೆ ಹಿಡಿದಿದ್ದಾರೆ.