Thursday, April 17, 2025

ಪ್ರವಾದಿ ಮಹಮ್ಮದ್​ರ ಬಗ್ಗೆ ಅವಹೇಳನಕಾರಿ ಹೇಳಿಕೆ; ಯತ್ನಾಳ್​ ವಿರುದ್ದ ಪ್ರಕರಣ ದಾಖಲು

ವಿಜಯಪುರ : ಪ್ರವಾದಿ ಮಹಮ್ಮದ್​ರ ಕುರಿತ ಅವಹೇಳನಕಾರಿ ಹೇಳಿಕೆ ನೀಡದ ಆರೋಪದ ಮೇಲೆ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ರ ಮೇಲೆ ವಿಜಯಪುರದಲ್ಲಿ ಪ್ರಕರಣ ದಾಖಲಾಗಿದ್ದು. ಮೊಹಮ್ಮದ್​ ಹನ್ನಾನ್​ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಕಳೆದ ಏಪ್ರಿಲ್ 7 ರಂದು ಹುಬ್ಬಳ್ಳಿಯ ಬಾಣಿ ಓಣಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಯತ್ನಾಳ್​. ಇಸ್ಲಾಂ ಧರ್ಮ ಮತ್ತು ಪ್ರವಾದಿ ಮಹಮ್ಮದ್​ರ ಬಗ್ಗೆ ಪ್ರಚೋದನಕಾರಿ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದ್ದು. ದಿವಂಗತ ಬಾಳಾಸಾಹೇಬ್​ ಠಾಕ್ರೆ ಮನೆಯಲ್ಲಿ ಮಹಮ್ಮದ ಪೈಗಂಬರ್​ ಹುಟ್ಟಿದ್ದಾನೆ ಎಂದು ಹೇಳಿದ್ದರು. ಈ ಮಾತಿನಿಂದ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ತೀವ್ರ ಆಘಾತ ಉಂಟುಮಾಡಿದೆ ಎಂದು ದೂರು ನೀಡಲಾಗಿದೆ.

ಇದನ್ನೂ ಓದಿ :ಪೈಶಾಚಿಕ ಕೃತ್ಯ; 16 ವರ್ಷದ ಮಗಳ ಮೇಲೆ ತಂದೆಯಿಂದ ನಿರಂತರ ಅತ್ಯಾಚಾರ

ವಿಜಯಪುರ ನಗರದ ಮೊಹಮ್ಮದ್ ಹನ್ನಾನ್ ಎಂಬುವವರಿಂದ ದೂರು ದಾಖಲು. ಯತ್ನಾಳ್ ಹೇಳಿಕೆ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರೋ ಸಾಧ್ಯತೆ ಇದೆ ಎಂದು ದೂರುದಾರ ದೂರಿದ್ದಾನೆ. ದೂರಿನನ್ವಯ ಗೋಲ್​ಗುಂಬಜ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES