ನೆಲಮಂಗಲ : ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ಯುವಕನನ್ನು ಮದುವೆಯಾಗಲು ವಿವಾಹಿತ ಮಹಿಳೆ ಮನೆ ಬಿಟ್ಟು ಹೋಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದ್ದು. ಓಡಿಹೋದ ಪತ್ನಿಯ ಮದುವೆಯನ್ನು ಇನ್ಸ್ಟ್ಗ್ರಾಂ ರೀಲ್ಸ್ನಲ್ಲಿ ನೋಡಿದ ಪತಿ ಶಾಕ್ ಆಗಿದ್ದಾನೆ. ಗಂಡನನ್ನು ಬಿಟ್ಟು ಗೆಳೆಯನ ಹಿಂದೆ ಓಡಿ ಹೋದ ಮಹಿಳೆಯನ್ನು ನೇತ್ರಾವತಿ ಎಂದು ಗುರುತಿಸಲಾಗಿದೆ.
ಡ್ರೈವರ್ ಕೆಲಸ ಮಾಡಿಕೊಂಡಿದ್ದ ರಮೇಶ್ ಎಂಬಾತನನ್ನು ನೇತ್ರಾವತಿ ಕಳೆದ 13 ವರ್ಷದ ಹಿಂದೆ ಮದುವೆಯಾಗಿದ್ದಳು. ದಂಪತಿಗಳಿಬ್ಬರು ಕಳೆದ ಮೂರು ವರ್ಷದಿಂದ ನೆಲಮಂಗಲ ನಗರದ ಜಕ್ಕಸಂದ್ರದ ರಾಘವೇಂದ್ರನಗರದಲ್ಲಿ ವಾಸವಾಗಿದ್ದರು.
ಇದನ್ನೂ ಓದಿ :ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿನಿ ಆತ್ಮಹ*ತ್ಯೆಗೆ ಶರಣು
ಆದರೆ ನೇತ್ರಾವತಿಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಸಂತೋಷ ಎಂಬಾತನ ಪರಿಚಯವಾಗಿ, ಪರಿಚಯ ಪ್ರೀತಿಯಾಗಿ ಬೆಳೆದಿತ್ತು. ಪರಿಚಯವಾದ ಒಂದೇ ವಾರದಲ್ಲಿ ನೇತ್ರಾವತಿ ಮನೆ ಬಿಟ್ಟು ಸಂತೋಷ್ನೊಂದಿಗೆ ಓಡಿ ಹೋಗಿದ್ದು, ಕಳೆದ ಒಂದು ವಾರದ ಹಿಂದೆ ಆತನೊಂದಿಗೆ ಮದುವೆಯಾಗಿದ್ದಾಳೆ.
ಪತ್ನಿಯ ಮದುವೆಯನ್ನು ಇನ್ಸ್ಟಾಗ್ರಾಂನಲ್ಲಿ ನೋಡಿದ ಪತಿ ಶಾಕ್ ಆಗಿದ್ದು. ಪೊಲೀಸರ ಭದ್ರತೆಯಲ್ಲಿ ಮನೆಯಿಂದ ಬಟ್ಟೆ ಕೊಂಡ್ಡೊಯ್ಯಲು ಬಂದಿದ್ದ ನೇತ್ರಾವತಿಗೆ ಮನೆಯವರು ಕ್ಲಾಸ್ ತೆಗೆದುಕೊಂಡಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.