ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ನಮ್ಮ ಕರ್ನಾಟಕದ ಹೆಮ್ಮೆಯ ಶ್ರೀಕಂಠೇಶ್ವರನ ದಿವ್ಯ ಸನ್ನಿಧಾನವಾದ ಪರಮ ಪುಣ್ಯ ಕ್ಷೇತ್ರವಾದ ನಂಜನಗೂಡಿನಲ್ಲಿ ಇದೇ ತಿಂಗಳು(ಏಪ್ರಿಲ್) 9ರಿಂದ ಶುರುವಾಗಿ 15 ದಿನಗಳ ವರೆಗೂ ನಂಜನಗೂಡು ಶ್ರೀ ಕ್ಷೇತ್ರದಲ್ಲಿ ಕೆಲವೊಂದು ಅವಗಢ, ಅಹಿತಕರ ಘಟನೆಗಳು, ರಥೋತ್ಸವಕ್ಕೆ ಅನೇಕ ವಿಘ್ನಗಳ ಜೊತೆಗೆ ಕೋಮುಗಲಭೆಗಳು ಅಥವಾ ಅಂತರ್ ಜಾತಿ ಗಲಭೆಗಳು ನಡೆಯುವ ಸೂಚನೆಗಳು ಕಾಲಜ್ಞಾನದ ಪ್ರಕಾರ ಮತ್ತು ಗ್ರಹಗತಿಗಳ ಆಧಾರದ ಮೇಲೆ ಸೂಚಿಸುತ್ತಿರುವುದರಿಂದ ದೇವಸ್ಥಾನದ ಆಡಳಿತ ಮಂಡಳಿಯವರು ದೈವದ ಕೃಪೆಗಾಗಿ ಹೋಮ-ಹವನಗಳನ್ನು ಮಾಡುವುದು ಸೂಕ್ತ ಎಂದು ದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಶ್ರೀಕಂಠೇಶ್ವರ ಅನುಗ್ರಹದಿಂದ ನಮ್ಮ ನಾಡಿನಲ್ಲಿ ಉತ್ತಮವಾಗಿ ಮಳೆ-ಬೆಳೆಗಳು ಉಂಟಾಗಲಿ ಎಂದು ಪ್ರಾರ್ಥನೆಯನ್ನ ಮಾಡುತ್ತಾ ನಾಡಿನಲ್ಲಿ ಸಮೃದ್ಧಿ ದೊರಕಲಿ ಎಂದು ಶುಭಾಶಿರ್ವಾದವನ್ನು ನೀಡುತ್ತಾ ಒಳ್ಳೆಯದನ್ನು ಒಳ್ಳೆಯದನ್ನೇ ಮಾಡಿ ನಿಮಗೂ ಒಳಿತೆ ಆಗುತ್ತದೆ ಎಂದು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಹೇಳಿದ್ದಾರೆ.