Wednesday, January 15, 2025

ಅಣ್ಣಿಗೇರಿ ಪಟ್ಟಣದಲ್ಲಿ ಭಾರಿ ಮಳೆ ಮನೆಗೆ ನುಗ್ಗಿದ ನೀರು..!

ಧಾರವಾಡ : ಜಿಲ್ಲೆಯಲ್ಲಿ ಬೆಳಗ್ಗೆಯಿಂದ ನಿರಂತರ ಮಳೆ ಸುರಿಯುತ್ತಿದೆ. ಸತತವಾಗಿ ಸುರಿಯುತ್ತಿರುವ ಮಳೆ ಅವಳಿ ನಗರ ಅಲ್ಲದೆ ಹಲವು ಕಡೆ ಅವಾಂತರ ಸೃಷ್ಟಿಸಿದೆ.‌
ಅಣ್ಣಿಗೇರಿ ಪಟ್ಟಣದಲ್ಲಿಯೂ‌ ಕೂಡ ನಿರಂತರ ಮಳೆಯಿಂದಾಗಿ ಮನೆಗೆ ನೀರು ನುಗ್ಗಿದೆ. ಈಶ್ವರ್ ಎನ್ನುವವರಿಗೆ ಸೇರಿದ ಮನೆಯಲ್ಲಿ ಮಳೆ ನೀರು ನುಗ್ಗಿದ್ದು ಮಳೆ ನೀರನ್ನು ಹೊರ ಹಾಕಲು ಮನೆಯವರು ಹರಸಾಹಸಪಡುತ್ತಿದ್ದಾರೆ. ಇನ್ನು ನಗರದಲ್ಲಿಯೂ‌‌ ಕೂಡ ಬೆಳಗ್ಗೆಯಿಂದ ಮಳೆಯಾಗುತ್ತಿದ್ದು ಜನರು ಕೆಲಸ ಕಾರ್ಯಾಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ವಾಹನ ಸವಾರರು ಪರದಾಡುತ್ತಿದ್ದು, ಜನಜೀವನ‌ ಅಸ್ತವ್ಯಸ್ತಗೊಂಡಿದೆ.

RELATED ARTICLES

Related Articles

TRENDING ARTICLES