ಮಂಡ್ಯ : ಸಚಿವ ಚೆಲುವರಾಯಸ್ವಾಮಿಗೆ ಜೋಕರ್ ಎಂದಿದ್ದ ಹೆಚ್ಡಿಕೆಗೆ ಹೇಳಿಕೆಗೆ ಚೆಲುವರಾಯಸ್ವಾಮಿ ಟಾಂಗ್ ನೀಡಿದ್ದು. ರಮ್ಮಿ ಆಟದಲ್ಲಿ ಜೋಕರ್ನನ್ನು ಯಾವುದಕ್ಕಾದರು ಸೇರಿಸಬಹುದು. ಅದೇ ರೀತಿ ಆಡಳಿತಕ್ಕಾಗಿ ಯಾರ ಜೊತೆ ಬೇಕಾದರು ಹೋಗುವ ಅವರು ಜೋಕರ್ ? ಅವರು ನನ್ನನ್ನು ಜೋಕರ್ ಎನ್ನುತ್ತಾರೆ. ಈ ಪದಕ್ಕೆ ಅವರೇ ಹೆಚ್ಚು ಸೂಕ್ತ ಎಂದು ಹೇಳಿದರು.
ಹೆಚ್ಡಿಕೆ ಹೇಳಿಕೆಗೆ ಕೃಷಿ ಸಚಿವ ಚೆಲುವರಾಯಸ್ವಾಮಿ ಟಾಂಗ್ ಕೊಟ್ಟಿದ್ದು. ರಮ್ಮಿ ಆಟದ ಜೋಕರ್ ರೀತಿ HDK ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಹೋಗುತ್ತಾರೆ. ಈ ಪದಕ್ಕೆ ಅವರೇ ಹೆಚ್ಚು ಸೂಕ್ತ. ಮಂಡ್ಯಕ್ಕೆ ಐಐಟಿ ಬೇಕು ಎಂದು ನಾನು ಪತ್ರ ಬರೆದಿದ್ದೆ, ಅದೇ ರೀತಿ ಅವರು ಹಾಸನಕ್ಕೆ ಐಐಟಿ ಬೇಕು ಎಂದು ಪತ್ರ ಬರೆದಿದ್ದಾರಾ.
ಇದನ್ನೂ ಓದಿ :ಬಿಡದಿಯಲ್ಲಿ ಏರ್ಪೋರ್ಟ್ ಮಾಡ್ತಿಲ್ಲಾ, ಅಲ್ಲಿ ಡಿಕೆಶಿ ಲೇಔಟ್ ಮಾಡ್ತಿದ್ದಾರೆ: ಎಂ.ಬಿ ಪಾಟೀಲ್
ಅವರ ತಂದೆ ಪ್ರಧಾನಮಂತ್ರಿ, ಆದರೆ ನನ್ನ ತಂದೆ ರೈತ. ನಾನು ಜಿ.ಪಂ ಸದಸ್ಯನಿಂದ ರಾಜಕಾರಣ ಮಾಡಿದ್ದೇನೆ.
ನನಗೆ ಜನರ ಕಷ್ಟ ಗೊತ್ತಿದೆ. ಅವರು ನನ್ನ ಮಂತ್ರಿ ಮಾಡಿದ್ದೇನೆ ಅನ್ನೋದಾದರೆ ನಾನು ಅವ್ರನ್ನ ಸಿಎಂ ಮಾಡಿದ್ದೀನಿ ಅನ್ನೋದು ತಪ್ಪಲು. ಕುಮಾರಸ್ವಾಮಿಗೆ ಸಿದ್ದರಾಮಯ್ಯ, ಡಿಕೆಶಿ, ಚಲುವರಾಯಸ್ವಾಮಿಗೆ ಬೈಯ್ಯುವ ಚಪಲ. ಅವರ ಬಗ್ಗೆ ಮಾತನಾಡಿ ನಾಲಿಗೆ ಹೊಲಸು ಮಾಡಿಕೊಳ್ಳಲು ಇಷ್ಟವಿಲ್ಲ. ಹೆಚ್ಡಿಕೆಯಿಂದ ರಾಜಕಾರಣ ಕಲಿಯುವ ಅವಶ್ಯಕತೆ ನನಗಿಲ್ಲ.
ಕುಮಾರಸ್ವಾಮಿ ನಾಯಕರನ್ನಾಗಿ ಮಾಡಲು ನಾವು ಸಾಥ್ ಕೊಟ್ವಾ? ಇಲ್ವಾ? ಅಂಥಾ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡ್ತಾರಾ? ಜೋಕರ್ ಪದ ನನಗಿಂತ ಅವರಿಗೆ ಹೆಚ್ಚು ಸೂಟ್ ಆಗುತ್ತದೆ. ಕುಮಾರಸ್ವಾಮಿ ಕಂಡರೆ ನಾನು ಬೆಚ್ಚಿ ಓಡಿಹೋಗಲ್ಲ. ಕುಮಾರಸ್ವಾಮಿ ಏನು ಹುಟ್ಟುತ್ತಲೇ ಶ್ರೀಮಂತರ? ಹಾಗಾದ್ರೆ ಈ ಕುರಿತು ವೈಟ್ ಪೇಪರ್ ಕೊಡಲಿ ನೋಡೋಣ. ಹೈಕೋರ್ಟ್ ಆದೇಶದಂತೆ ಅವರು ಮಾಡಿದ್ದ ಒತ್ತುವರಿ ತೆರವು ಮಾಡಿದ್ದೇವೆ ಎಂದು ಹೇಳಿದರು.