ಬೆಂಗಳೂರು : ರಾಜ್ಯದಲ್ಲಿ ಎರಡನೇ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಾಗ ಗುರುತಿಸಲು ಕೇಂದ್ರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿದ್ದು. ಈ ವಿಚಾರದ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್ ಬಿಡದಿಯಲ್ಲಿ ವಿಮಾನ ನಿಲ್ದಾಣ ಮಾಡುತ್ತಿಲ್ಲ. ಅಲ್ಲಿ ಡಿಕೆ ಶಿವಕುಮಾರ್ ಲೇಔಟ್ ಮಾಡುತ್ತಿದ್ದಾರೆ ಎಂದು ಹೇಳಿದರು.
ಕೇಂದ್ರ ಅಧ್ಯಯನ ತಂಡದ ಭೇಟಿ ವಿಚಾರವಾಗಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ‘ನಿನ್ನೆ ಇವತ್ತು, ನಾಳೆ ಅವರು ಇರ್ತಾರೆ. ಮೂರು ದಿನ ಇದ್ದು ಸ್ಥಳ ಪರಿಶೀಲನೆ ಮಾಡ್ತಾರೆ. ಅವರ ನೀಡುವ ವರದಿ ಮೇಳೆ ನಾವು ಡಿಪಿಆರ್ ಮಾಡುತ್ತೇವೆ. ಏರ್ಪೋರ್ಟ್ ನಿರ್ಮಾಣಕ್ಕೆ ದೊಡ್ಡ ದೊಡ್ಡ ಕಂಪನಿಗಳನ್ನು ನೋಡಬೇಕು. ಈಗಾಗಲೇ ಏರ್ಪಪೋರ್ಟ್ ನಿರ್ಮಾಣ ಮಾಡಿರುವ ಕಂಪನಿಗಳನ್ನು ನೋಡಬೇಕು. ಈ ಕುರಿತು ಕ್ಯಾಬಿನೆಟ್ನಲ್ಲಿ ಚರ್ಚಿಸಬೇಕಾಗಿದೆ ಎಂದು ಹೇಳಿದರು.
ಇದನ್ನೂ ಓದಿ :ಸಿಂಗಾಪುರ ಶಾಲೆಯಲ್ಲಿ ಬೆಂಕಿ ಅವಘಡ; ಪವನ್ ಕಲ್ಯಾಣ್ ಪುತ್ರನಿಗೆ ಗಂಭೀರ ಗಾಯ
ಬಿಡದಿ ಏರ್ಪೋರ್ಟ್ಗೆ ಸೂಕ್ತವಲ್ಲ..!
ಏರ್ಪೋರ್ಟ್ಗೆ ಬಿಡದಿ ಸೂಕ್ತವಲ್ಲ ಎಂಬ ಟಿಕ್ನಿಕಲ್ ಟೀಂ ವರದಿ ವಿಚಾರವಾಗಿ ಮಾತನಾಡಿದ ಎಂಬಿ ಪಾಟೀಲ್ ‘ನಾವು ಬಿಡದಿಯಲ್ಲಿ ಮಾಡ್ತಿಲ್ಲ, ಅಲ್ಲಿ ಡಿಕೆಶಿವಕುಮಾರ್ ಲೇಔಟ್ ಮಾಡ್ತಿದ್ದಾರೆ. ಗ್ರೇಟರ್ ಬಿಡದಿಯಲ್ಲಿ ಸೈಟ್ ಮಾಡ್ತಿದ್ದಾರೆ. ಹಾರೋಹಳ್ಳಿ ಬಳಿ ಒಂದು ಜಾಗ ನೋಡಲಾಗಿದೆ. ಕುಣಿಗಲ್ ರಸ್ತೆ ಬಳಿ ಒಂದು ಜಾಗ ನೋಡಿದ್ದೇವೆ
ವಿಧಾನಸೌಧಕ್ಕೆ 50 ಕಿ.ಮೀ ದೂರ ಇದೆ. ಅಲ್ಲಿ ಏರ್ಪೋರ್ಟ್ ಮಾಡುವ ಬಗ್ಗೆ ತೀರ್ಮಾನ ಮಾಡಬೇಕು ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದರು.