ಬೆಂಗಳೂರು : ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಟಾರೀಫ್( ಪ್ರತಿಸುಂಕ) ಪ್ರಭಾವದಿಂದಾಗಿ ಜಾಗತಿಗ ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗುತ್ತಿದ್ದು. ಇದರ ನಡುವೆ ಆಭರಣ ಪ್ರಿಯರಿಗೆ ಸಿಹಿ ಸುದ್ದಿ ದೊರೆತಿದೆ. ಶರವೇಗದಲ್ಲಿ ಏರಿಕೆಯಾಗಿತ್ತಿದ್ದ ಚಿನ್ನದ ದರ ಕಳೆದ ಮೂರು ದಿನಗಳಿಂದ ಇಳಿಕೆಯಾಗಿದೆ.
ಹೌದು..ಗಗನ ಮುಖಿಯಾಗಿ ಪ್ರತಿ ದಿನವೂ ಏರಿಕೆಯತ್ತಲೆ ಸಾಗುತ್ತಿದ್ದ ಚಿನ್ನಭರಣದ ದರ ಇಳಿಕೆಯಾಗಿದ್ದು. ಟ್ರಂಪ್ ಜಾಗತಿಕವಾಗಿ ವಿಧಿಸಿರುವ ಸುಂಕ ನೀತಿಯಿಂದ ಚಿನ್ನದ ದರ ಇಳಿಕೆಯಾಗಿದೆ. ಜೊತೆಗೆ ಅಂತರ್ ರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಯಲ್ಲೂ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ.
ಇದನ್ನೂ ಓದಿ :ಹಿಂದೂ ದೇವಾಲಯಕ್ಕೆ ಕಲ್ಲೆಸೆದ ಅನ್ಯಕೋಮಿನ ಯುವಕನಿಗೆ ಧರ್ಮದೇಟು
ಎಷ್ಟು ದರ ಇಳಿಕೆ?
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,250 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,730 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,300 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 940 ರೂ
ದೇಶದ ವಿವಿಧ ನಗರದಲ್ಲಿ ಚಿನ್ನದ ಬೆಲೆ
- ಬೆಂಗಳೂರು: 82,250 ರೂ
- ಚೆನ್ನೈ: 82,250 ರೂ
- ಮುಂಬೈ: 82,250 ರೂ
- ದೆಹಲಿ: 82,400 ರೂ
- ಕೋಲ್ಕತಾ: 82,250 ರೂ
- ಕೇರಳ: 82,250 ರೂ
- ಅಹ್ಮದಾಬಾದ್: 82,300 ರೂ
- ಜೈಪುರ್: 82,400 ರೂ
- ಲಕ್ನೋ: 82,400 ರೂ
- ಭುವನೇಶ್ವರ್: 82,250 ರೂ
ಟ್ರಂಪ್ ಸುಂಕ ನೀತಿಯಿಂದ ಚಿನ್ನದ ದರ ದಿಢೀರ್ ಇಳಿಕೆ ಕಂಡಿದೆ. ಮುಂದಿನ ದಿನದಲ್ಲಿ ಪ್ರತಿ ಗ್ರಾಂಗೆ 7,500 ರೂ. ಆಗಬಹುದು ಎನ್ನುವ ಲೆಕ್ಕಾಚಾರ ವನ್ನು ತಜ್ಞರು ಮಾಡುತ್ತಿದ್ದಾರೆ. ಒಂದು ಲಕ್ಷದ ಗಡಿಗೆ ತಲುಪಿದ್ದ ಚಿನ್ನದ ದರ ಇಳಿಕೆ ಈಗ ಜನರಿಗೆ ಕೊಂಚ ರಿಲೀಫ್ ಮೂಡಿಸಿದೆ.