Saturday, April 19, 2025

ಹಿಂದೂ ದೇವಾಲಯಕ್ಕೆ ಕಲ್ಲೆಸೆದ ಅನ್ಯಕೋಮಿನ ಯುವಕನಿಗೆ ಧರ್ಮದೇಟು

ಬೆಳಗಾವಿ : ಹಿಂದೂ ದೇವಾಲಯಕ್ಕೆ ಕಲ್ಲೆಸೆದ ಅನ್ಯಕೋಮಿನ ಯುವಕನಿಗೆ ಧರ್ಮದೇಟು ನೀಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದ್ದು. ಕಲ್ಲೆಸೆದ ದುಷ್ಕರ್ಮಿಯನ್ನು 19 ವರ್ಷದ ಯಾಸೀರ್ ನರಸದಿ ಎಂದು ಗುರುತಿಸಲಾಗಿದೆ.

ಬೆಳಗಾವಿಯಲ್ಲಿರುವ ಪಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮ ಮಂದಿರಕ್ಕೆ ಯಾಸಿರ್​ ಎಂಬಾತ ಕಲ್ಲೆಸೆದಿದ್ದ. ಈ ಯುವಕ ಬೆಳಗಾವಿಯ ಉಜ್ವಲ ನಗರದಲ್ಲಿ ವಾಸಿಸುತ್ತಿದ್ದ, ಇದೇ ತಿಂಗಳಲ್ಲಿ ಎರಡನೇ ಭಾರಿಗೆ ದೇವಾಲಯಕ್ಕೆ ಕಲ್ಲೆಸೆದಿದ್ದಾನೆ ಎಂದು ತಿಳಿದು ಬಂದಿದೆ. ದಕ್ಷಿಣ ಭಾರತದ ಏಕೈಕ ಅಶ್ವತ್ಥಾಮ ದೇವಾಲಯದ ಮೇಲೆ ಕಲ್ಲೆಸೆತವಾಗಿದ್ದು. ಕಲ್ಲೆಸೆದ ಯುವಕನಿಗೆ ಸ್ಥಳೀಯರು ಧರ್ಮದೇಟು ನೀಡಿದ್ದಾರೆ.

ಇದನ್ನೂ ಓದಿ :ತಂದೆಯ ಸಾವಿನ ನೋವಿನಲ್ಲೂ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದ ಅಣ್ಣ ತಂಗಿ

ಸ್ಥಳೀಯರು ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದು. ಘಟನೆ ಸಂಬಂಧ ಮಾರ್ಕೆಟ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿಂದೂ ಯುವಕರು ಜಮಾಯಿಸಿದ್ದು. ಘಟನಾ ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾನವಾಗಿದೆ. ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿ ಮಾನಸಿಕ ಅಸ್ವಸ್ಥ ಎಂದು ಮಾಹಿತಿ ತಿಳಿಸಿದ್ದಾರೆ.

ದೇವಾಲಯದ ಬಳಿ ಬಿಗುವಿನ ವಾತವರಣ ನಿರ್ಮಾಣವಾಗಿದ್ದು. ಭದ್ರತೆಗಾಗಿ ಕೆಎಸ್​ಆರ್​ಪಿ ಪೊಲೀಸ್​ ತುಕಡಿಯನ್ನು ನಿಯೋಜಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳಗಾವಿ ಡಿಸಿಪಿ ರೋಶನ್ ಜಗದೀಶ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES