ಚಿತ್ರದುರ್ಗ : ಕರೋನ ಬಗ್ಗೆ ಹೆದರಬೇಡಿ ಅದು ಏನು ಮಾಡಲ್ಲ. 96 ವರ್ಷದ ನಾನೆ ಅದನ್ನ ಎದುರಿಸಿ ಗುಣಮುಖಳಾಗಿದ್ದೇನೆ ಇನ್ನು ನಿಮ್ಮಂತ ಯುವಕ ಯುವತಿಯರು ಹಾಗು ಮದ್ಯ ವಯಸ್ಕರು ಅದು ಸುಲಬವಾಗಿ ಎದುರಿಸಿ ಅಂತ ಹಿರಿಯೂರು ಮೂಲದ 96 ವಯಸ್ಸಿನ ಗೊವಿಂದಮ್ಮ ರಾಜ್ಯದ ಜನತೆಗೆ ಸಲಹೆ ನೀಡಿದ್ದಾರೆ. ಮನೆಯಲ್ಲಿ ಉತ್ತಮ ಅಹಾರ ಹಾಗು ಶುಚಿತ್ವ ಕಾಪಾಡಿಕೊಳ್ಳಿ ಅಂತ ಧೈರ್ಯ ತುಂಬಿದ್ದಾರೆ. ಮಾನಸಿಕವಾಗಿ ಗಟ್ಟಿಯಾಗಿ ಇದ್ದರೆ ಸಾಕು ಕರೋನಾ ಎನು ಮಾಡಲ್ಲ ಅಂತ ಆತ್ಮ ಸ್ಥೈರ್ಯವನ್ನು ಇತರ ಕರೋನಾ ಸೊಂಕಿತರಿಗೆ ತುಂಬಿದ್ದಾರೆ ಈ ಅಜ್ಜಿ.