ಹುಬ್ಬಳ್ಳಿ : ಕೊರೊನಾ ವೈರಸ್ ಖಾಕಿ ಪಡೆಗೆ ಬೆನ್ನು ಬಿಡದೇ ಕಾಡುತ್ತಿದೆ. ಹುಬ್ಬಳ್ಳಿಯ ಉಪನಗರ ಠಾಣೆಯ ಮಹಿಳಾ ಕಾನ್ಸಟೇಬಲ್ ಗೂ ಸೋಂಕು ತಗುಲಿದ್ದು, ಪೊಲೀಸ್ ಸಿಬ್ಬಂದಿಗಳಲ್ಲಿ ಮತ್ತಷ್ಟು ಆತಂಕ ಉಂಟಾಗಿದೆ. 39 ವರ್ಷದ ಮಹಿಳಾ ಸಿಬ್ಬಂದಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ನೆಗಡಿ, ಕೆಮ್ಮು ಹಿನ್ನೆಲೆಯಲ್ಲಿ ತಪಾಸಣೆಗೆ ಒಳಗಾಗಿದ್ದರು. ಕಳೆದ ಮೂರು ದಿನದಿಂದ ರಜೆಯಲ್ಲಿದ್ದರು. ಕಚೇರಿಗೆ ಆಗಮಿಸಿಸುತ್ತಿದ್ದಂತೆ ವರದಿ ಬಂದಿದೆ.
ಈಗಾಗಲೇ ಕಳ್ಳತನ ಆರೋಪಿಯಿಂದ ಇಬ್ಬರು ಸಿಬ್ಬಂದಿಗೆ ಸೋಂಕು ತಗುಲಿತ್ತು. ಇದೀಗ ಮಹಿಳಾ ಸಿಬ್ಬಂದಿಗೂ ವೈರಸ್ ಅಟ್ಯಾಕ್ ಆಗಿದ್ದು, ಉಪನಗರ ಠಾಣೆ ಪೊಲೀಸರಿಗೆ ಮತ್ತಷ್ಟು ಆತಂಕ ಶುರುವಾಗಿದೆ..