Tuesday, April 8, 2025

ಮದುವೆಯಾಗಬೇಕಿದ್ದ ಹುಡುಗನನ್ನೇ ಕೊಲ್ಲಲ್ಲು ಸುಪಾರಿ ಕೊಟ್ಟ ವಧು..!

ಮುಂಬೈ : ನಿಶ್ಚಯವಾಗಿದ್ದ ಮದುವೆಯನ್ನು ತಪ್ಪಿಸಬೇಕೆಂದು ಯುವತಿಯೊಬ್ಬಳು ವರನನ್ನು ಕೊಲೆ ಮಾಡಲು ಸುಪಾರಿ ನೀಡಿರುವ ಘಟನೆ ಮುಂಬೈನಲ್ಲಿ ನಡೆದಿದ್ದು. ಸುಪಾರಿ ನೀಡಿದ ಯುವತಿಯನ್ನು ಮಯೂರಿ ಸುನೀಲ್​ ದಾಂಗ್ಡೆ ಎಂದು ಗುರುತಿಸಲಾಗಿದೆ.

ಹೌದು.. ತಾಳಿ ಕಟ್ಟುವ ಕೊನೆ ಗಳಿಗೆಯಲ್ಲಿ ಮದುವೆ ಬೇಡವೆಂದು ಎಷ್ಟೋ ಮದುವೆಗಳು ನಿಂತಿರುವ ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಆದರೆ ಇಲ್ಲೊಬ್ಬ ಯುವತಿಯೊಬ್ಬಳು ನಿಶ್ಚಯವಾಗಿದ್ದ ಮದುವೆಯನ್ನು ನಿಲ್ಲಿಸುವ ಸಲುವಾಗಿ ಮಾಜಿ ಪತಿಯ ಪ್ರಾಣವನ್ನೇ ತೆಗೆಯಲು ಸುಪಾರಿ ನೀಡಿದ್ದಾಳೆ.  ಅಹಲ್ಯಾನಗರದ ಮಯೂರಿ ಸುನಿಲ್ ದಾಂಗ್ಡೆ ಎಂಬ ಆರೋಪಿ, ಮಹಿ ಜಲಗಾಂವ್‌ನ ಸಾಗರ್ ಜಯಸಿಂಗ್ ಕದಮ್ ಅವರನ್ನು ಮದುವೆಯಾಗಬೇಕಿತ್ತು. ಇವರಿಬ್ಬರ ನಡುವೆ ನಿಶ್ಚಿತಾರ್ಥ ಮತ್ತು ವಿವಾಹಪೂರ್ವ ಫೋಟೋ ಶೂಟ್ ಕೂಡ ನಡೆದಿತ್ತು. ಆದರೆ ಯುವತಿ ನಂತರ ಯುವಕನನ್ನು ಮದುವೆಯಾಗದಿರಲು ನಿರ್ಧರಿಸಿದ್ದಳು.

ವರ ಜಯಸಿಂಗ್​ ಕದಮ್​ನನ್ನು ಕೊಲೆ ಮಾಡಲು ಮಯೂರಿ ಮತ್ತು ಆಕೆಯ ಸಹಚರ ಸಂದೀಪ್​ ಗಾವ್ಡೆ 1.50 ಲಕ್ಷ ಹಣಕ್ಕೆ ಸುಮಾರಿ ನೀಡಿದ್ದರು ಎಂದು ಆರೋಪಿಸಲಾಗಿದೆ. ಸುಪಾರಿ ಪಡೆದಿದ್ದ ಆರೋಪಿಗಳು ಫೆಬ್ರವರಿ 27ರಂದು ದೌಂಡ್​ ತಾಲ್ಲೂಕಿನ ಹೋಟೆಲ್​ ಬಳಿ ವರನ ಮೇಲೆ ಕ್ರೂರವಾಗಿ ಥಳಿಸಲಾಗಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ವರಿಷ್ಟರ ಜೊತೆ ಮಾತನಾಡಿ ಯತ್ನಾಳರನ್ನು ಪಕ್ಷಕ್ಕೆ ಮರಳಿ ಕರೆತರುತ್ತೇವೆ: ಕುಮಾರ್​ ಬಂಗಾರಪ್ಪ

ವರನ ಮೇಲೆ ಕ್ರೂರವಾಗಿ ಥಳಿಸಿದ್ದು. ವರನ ಕಾಲು ಮುರಿದು, ತಲೆ ಮತ್ತು ಬೆನ್ನಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು. ಅಹಲ್ಯಾನಗರದ ನಿವಾಸಿಗಳಾದ ಆದಿತ್ಯ ಶಂಕರ ದಂಗಡೆ, ಸಂದೀಪ್ ದಾದಾ ಗಾವಡೆ, ಶಿವಾಜಿ ರಾಮದಾಸ್ ಜಾರೆ, ಸೂರಜ್ ದಿಗಂಬರ ಜಾಧವ್ ಮತ್ತು ಇಂದ್ರಭಾನು ಸಖರಾಮ್ ಕೋಲ್ಪೆ ಸೇರಿದಂತೆ ಐವರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.

ತನಿಖೆಯ ಸಮಯದಲ್ಲಿ, ಶಂಕಿತರು ತಮ್ಮ ಸಹಚರರೊಂದಿಗೆ ಅಪರಾಧ ಮಾಡಿರುವುದಾಗಿ ಒಪ್ಪಿಕೊಂಡರು. ಯಾವತ್ ಪೊಲೀಸರು ಐದು ಶಂಕಿತರನ್ನು ಬಂಧಿಸಿ ಅಪರಾಧಕ್ಕೆ ಬಳಸಲಾದ ಬಿಳಿ ವೆರ್ನಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 109, 61(2), ಮತ್ತು 126(2) ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ. ಕೊಲೆ ಸುಪಾರಿ ನೀಡಿದ್ದ ಮಯೂರಿ ತಲೆಮರಿಸಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

RELATED ARTICLES

Related Articles

a

TRENDING ARTICLES