Wednesday, January 15, 2025

2000 ಆಯುಷ್ ವೈದ್ಯರ ಸಾಮೂಹಿಕ ರಾಜೀನಾಮೆಗೆ ನಿರ್ಧಾರ..! ರಾಜ್ಯ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ.!

ಬಳ್ಳಾರಿ : ದಿನದಿಂದ ದಿನಕ್ಕೆ ಕೊರೋನಾ ವಾರಿಯರ್ ಗಳು ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಿದ್ದಾರೆ. ವೇತನ ಮತ್ತು ಗೌರವಧನ ಸಿಕ್ಕಿಲ್ಲವೆಂದು ಆಶಾ ಕಾರ್ಯಕರ್ತೆಯರು, ಕೆಲವು ಕಡೆ ನರ್ಸ್ ಗಳು ಹಾಗೂ ಗುತ್ತಿಗೆ ವೈದ್ಯರು ಅಸಮಾಧಾನ ತೋಡಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ಇದೀಗ ಆಯುಷ್ ಇಲಾಖೆಯ ವೈದ್ಯರು ಸಹ ಸರ್ಕಾರದ ವಿರುದ್ಧ ಸಿಡಿದು ನಿಂತಿದ್ದಾರೆ. ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ನ ಸ್ಪಷ್ಟ ನಿರ್ದೇಶನಗಳು ಇದ್ದೂ ಸಹ ರಾಜ್ಯ ಸರ್ಕಾರ ನಮ್ಮನ್ನು ಕಡೆಗಣಿಸುತ್ತಿದೆ. ಲೆಬರ್ ಆಕ್ಟ್ ಪ್ರಕಾರ ನಮಗೆ ಸಿಗಬೇಕಾದ ನ್ಯಾಯ ಸಿಗುತ್ತಿಲ್ಲ. ನ್ಯಾಯಯುತವಾಗಿ ಸಿಗಬೇಕಾದ ಸಂಬಳವೂ ಸಿಗುತ್ತಿಲ್ಲ. ಆಯುಷ್ ಮತ್ತು ಅಲೋಪತಿ ವೈದ್ಯರ ಮಧ್ಯೆ ಇರುವ ಅಸಮಾನತೆ ನಿವಾರಿಸಬೇಕು. ನಾವು ಸಹ ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಅಲೋಪತಿ ವೈದ್ಯರಿಗೆ ಸರಿಸಮಾನವಾಗಿ ಕೆಲಸ ಮಾಡುತ್ತಿದ್ದೇವೆ. ನಮಗೆ ವೇತನ ತಾರತಮ್ಯ ಮತ್ತು ಸೇವಾಭದ್ರತೆ ನೀಡಬೇಕು ಅಂತ ಅಗ್ರಹಿಸಿದ್ದಾರೆ. ನಾವು ಸಹ ಕೊರೊನಾ ಕಷ್ಟ ಕಾಲದಲ್ಲಿ ಫ್ರಂಟ್ ಲೈನ್ ವಾರಿಯರ್ ಆಗಿ ಕೆಲಸ ಮಾಡ್ತಿದೀವಿ. ಆದರೆ ನಮ್ಮನ್ನ ಆಡಳಿತ ಕಡೆಗಣಿಸಿದೆ ಅಂತ ಆಯುಷ್ ಫೆಡರೇಷನ್ ಆಫ್ ಕರ್ನಾಟಕ ಆಕ್ರೋಶ ವ್ಯಕ್ತಪಡಿಸಿದೆ.

ಆಯುಷ್ ಇಲಾಖೆಯ ವೈದ್ಯರು ಸುಮಾರು ಸಲ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸಹ ಸರ್ಕಾರ ಕೇಳಿಸಿಕೊಂಡು ಸ್ಪಂದಿಸುತ್ತಿಲ್ಲ ಅಂತ ಆರೋಪಿಸಿದೆ. ಹಾಗಾಗಿ ಆಯುಷ್ ಇಲಾಖೆಯ 2000 ವೈದ್ಯರೆಲ್ಲರೂ ಸಾಮೂಹಿಕ ರಾಜೀನಾಮೆಗೆ ತೀರ್ಮಾನಿಸಿದ್ದಾರೆ. ಇದೇ ಜುಲೈ 15 ರಾಜ್ಯಾದ್ಯಾಂತ ಇರುವ 2000 ರಾಜ್ಯ ಆಯುಷ್ ವೈದ್ಯರೆಲ್ಲರೂ ಸಾಮೂಹಿಕ ರಾಜೀನಾಮೆ ತೀರ್ಮಾನಿಸಿದ್ದಾರೆ.

ನಿನ್ನೆಯಷ್ಟೇ ಗುತ್ತಿಗೆ ಇಲಾಖೆಯ ವೈದ್ಯರ ಸಮಸ್ಯೆ ಒಂದು ಹಂತಕ್ಕೆ ಬಗೆಹರಿಸಿದ ನೆಮ್ಮದಿಯಲ್ಲಿದ್ದ ಸರ್ಕಾರಕ್ಕೆ ಆಯುಷ್ ಇಲಾಖೆ ವೈದ್ಯರ ಈ ತೀರ್ಮಾನ ಸರ್ಕಾರಕ್ಕೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಆಯುಷ್ ಇಲಾಖೆಯ ವೈದ್ಯರ ಸಮಸ್ಯೆಗಳನ್ನು ಸರ್ಕಾರ ಯಾವ ರೀತಿ ಪರಿಹರಿಸುವುದೋ ಕಾದು ನೋಡಬೇಕು..

ಅರುಣ್ ನವಲಿ ಪವರ್ ಟಿವಿ ಬಳ್ಳಾರಿ

RELATED ARTICLES

Related Articles

TRENDING ARTICLES