ಮೈಸೂರು : ಕೊರೋನಾ ತಡೆಗಟ್ಟುವುದು ಸರ್ಕಾರಕ್ಕೆ ದೊಡ್ಡ ಸವಾಲು. ಸಾಕಷ್ಟು ಕಸರತ್ತು ನಡೆಸುತ್ತಿದ್ರೂ ನಿಯಂತ್ರಣಕ್ಕೆ ಬರುತ್ತಿಲ್ಲ.ಕೊರೊನಾ ಹರಡುವುದನ್ನ ಹತೋಟಿಗೆ ತರಲು ತಿ.ನರಸೀಪುರ ತಾಲೂಕಿನ ಕಲಿಯೂರು ಗ್ರಾಮದ ಮುಖಂಡರು ಡಂಗೂರದ ಮೊರೆ ಹೋಗಿದ್ದಾರೆ. ಮೈಸೂರು ಹಾಗೂ ಬೆಂಗಳೂರಿನಲ್ಲಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನಲೆ ಖಡಕ್ ಆದೇಶ ಸಾರಲಾಗಿದೆ.
ಮೈಸೂರು ಹಾಗೂ ಬೆಂಗಳೂರಿನಿಂದ ಯಾರೇ ಬಂದ್ರೂ ಅವರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.
ಕೊರೊನಾ ವರದಿ ನೆಗೆಟಿವ್ ಸರ್ಟಿಫಿಕೇಟ್ ಇದ್ರೆ ಮಾತ್ರ ಗ್ರಾಮಕ್ಕೆ ಎಂಟ್ರಿ ಎಂದು ಟಾಂ ಟಾಂ ಹೊಡೆಸಿದ್ದಾರೆ ಗ್ರಾಮದ ಮುಖಂಡರು.
ನಿಯಮ ಉಲ್ಲಂಘಿಸಿದ್ರೆ 25 ಸಾವಿರ ದಂಡ.
ಮಾಸ್ಕ್ ಧರಿಸದವರಿಗೆ 500 ರೂ ದಂಡ.
ಇಸ್ಪೀಟ್ ಆಡಿದ್ರೆ 25 ಸಾವಿರ ದಂಡ.
ಇಸ್ಪೀಟ್ ಆಡುವವರ ಮಾಹಿತಿ ಕೊಟ್ರೆ 5 ಸಾವಿರ ಬಹುಮಾನ.
ಅಕ್ರಮವಾಗಿ ಮರಳು ಸಾಗಣೆ ಮಾಡಿದ್ರೆ 25 ಸಾವಿರ ದಂಡ.
ಮಧ್ಯಾಹ್ನದ ನಂತರ ಅಂಗಡಿ ಮಳಿಗೆಗಳು ಬಂದ್ ಮಾಡಬೇಕು.
ಆಟೋ ಸಂಚಾರ ಮಾಡಬಾರದು.
ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ದಂಡ.
ಕಲಿಯೂರು ಗ್ರಾಮದ ಮುಖಂಡರ ಸಮ್ಮುಖದಲ್ಲೇ ಟಾಂ ಟಾಂ ಆಗಿದೆ. ಗ್ರಾಮದ ಸೇಫ್ಟಿಗೆ ತೆಗೆದುಕೊಂಡ ನಿರ್ದಾರ ಇದಾಗಿದೆ..