ಬರ್ಮಾ : ನೆರೆಯ ರಾಷ್ಟ್ರ ಮಯನ್ಮಾರ್ನಲ್ಲಿ ಭಾರೀ ಭೂಕಂಪ ಸಂಭವಿಸಿದ್ದು. ಮಯನ್ಮಾರ್ ಸ್ಥಳೀಯ ಸಮಯದ ಪ್ರಕಾರ ಮಧ್ಯಾಹ್ನ 12:50ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.2ರಷ್ಟು ತೀವ್ರತೆ ದಾಖಲಾಗಿದ್ದು. ರಾಷ್ಟ್ರೀಯ ಭೂಕಂಪ ಕೇಂದ್ರದ ಪ್ರಕಾರ ಭೂಕಂಪನದ ಕೇಂದ್ರಬಿಂದು ಭೂ ಅಕ್ಷಾಂಶ 21.93 ಉತ್ತರ, ಉದ್ದ: 96.07 ಪೂರ್ವದಲ್ಲಿದ್ದು. ಸುಮಾರು 10 ಕಿ.ಮೀ ಆಳದಲ್ಲಿ ಕಂಪನ ಸಂಭವಿಸಿದೆ.
ಬ್ಯಾಂಕಾಕ್ನಲ್ಲೂ ಭೂಕಂಪನದ ಅನುಭವವಾಗಿದ್ದು. ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬರುತ್ತಿರುವ ದೃಷ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಷ್ಟೇ ಅಲ್ಲದೇ ಈಜುಕೊಳದಲ್ಲಿರುವ ನೀರು ಕೂಡ ಹೊರ ಚೆಲ್ಲುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Earthquake pic.twitter.com/WCT7eNXPHA
— Bangkok Louie. (@LJP987) March 28, 2025
ಇದನ್ನೂ ಓದಿ : ನಿಮ್ಮ ತಾಯಿ-ತಂಗಿಯ ವಿಡಿಯೋ ನೋಡಿ ಖುಷಿಪಡಿ; ತಮಿಳು ನಟಿ ಶೃತಿ ಖಡಕ್ ಪ್ರತಿಕ್ರಿಯೆ
ಈ ತಿಂಗಳ ಆರಂಭದಲ್ಲಿಯೂ (ಮಾರ್ಚ್.03), ಮಯ್ಮಾನಾರ್ನಲ್ಲಿ ಭೂಕಂಪ ಸಂಭವಿಸಿದ್ದು. ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿತ್ತು. ಈ ಭೂಕಂಪ ಭೂ ಮೇಲ್ಮೈನಿಂದ ಸುಮಾರು 125 ಕಿಮೀ ಆಳದಲ್ಲಿ ಸಂಭವಿದ್ದು ವರದಿಯಾಗಿತ್ತು. ಆದರೆ ಈ ಬಾರಿ ಸಂಭವಿಸಿರುವ ಭೂಕಂಪ ಭೂಮಿಯಿಂದ ಕೇವಲ 10 ಕಿಮೀ ಆಳದಲ್ಲಿ. ಈ ಭೂಕಂಪವನ್ನು ಅತ್ಯಂತ ಅಪಾಯಕಾರಿ ಎಂದು ಹೇಳಲಾಗಿದೆ.