ಮಂಡ್ಯ : ಜಿಲ್ಲೆಯಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದ್ದು. ಸಾಲಭಾದೆಗೆ ಬೇಸತ್ತ ಕುಟುಂಬವೊಂದು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಮಾಸ್ತಪ್ಪ(65), ರತ್ನಮ್ಮ(45) ಮತ್ತು ಲಕ್ಷ್ಮೀ (18) ಎಂದು ಗುರುತಿಸಲಾಗಿದೆ
ಮೃತ ಮಾಸ್ತಪ್ಪ ಮತ್ತು ಕುಟುಂಬಸ್ಥರನ್ನು ಶ್ರೀ ರಂಗಪಟ್ಟಣದ ಗಂಜಾಂ ನಿವಾಸಿಗಳು ಎಂದು ಗುರುತಿಸಲಾಗಿದ್ದು. ಮೃತ ಮಾಸ್ತಪ್ಪ ಆಟೋ ಓಡಿಸಿಕೊಂಡು ಬದುಕಿನ ಬಂಡಿಯನ್ನು ಮುನ್ನಡೆಸುತ್ತಿದ್ದ. ಆದರೆ ಮಾಸ್ತಪ್ಪ ಸುಮಾರು 12 ಲಕ್ಷದಷ್ಟು ಸಾಲ ಮಾಡಿಕೊಂಡಿದ್ದನು. ಸಾಲಕೊಟ್ಟವರು ದಿನ ನಿತ್ಯ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದ ಕಾರಣಕ್ಕೆ ಮನನೊಂದಿದ್ದ ಕುಟುಂಬಸ್ಥರು ಮರ್ಯಾದೆಗೆ ಅಂಜಿ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ :ಸಿಸೇರಿಯನ್ ಬಳಿಕ ಬಟ್ಟೆ ಹೊಟ್ಟೆಯೊಳಗಿಟ್ಟು ಹೊಲಿಗೆ ಹಾಕಿದ ವೈದ್ಯರು
ಮಂಡ್ಯದ ಚಂದಗಾಲುವಿನ ಯರಳ್ಳಿ ಮಾರ್ಗದ ವಿಸಿ ನಾಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.