Monday, February 24, 2025

ಸಿಸೇರಿಯನ್ ಬಳಿಕ ಬಟ್ಟೆ ಹೊಟ್ಟೆಯೊಳಗಿಟ್ಟು ಹೊಲಿಗೆ ಹಾಕಿದ ವೈದ್ಯರು

ಮಂಗಳೂರು : ಪುತ್ತೂರಿನ ಖಾಸಗಿ ಆಸ್ಪತ್ರೆಯ ವೈದ್ಯರ ಎಡವಟ್ಟಿಗೆ ಮಹಿಳೆಯೊಬ್ಬರು ನರಕಯಾತನೆ ಅನುಭವಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು. ಮೂರು ತಿಂಗಳಿಂದ ಮಹಿಳೆ ನೋವಿನಿಂದ ನರಳಿದ್ದಾರೆ. ಇದೀಗ ಮಹಿಳೆಯ ಹೊಟ್ಟೆಯಿಂದ ಬಟ್ಟೆಯನ್ನು ಹೊರಗೆ ತೆಗೆದಿದ್ದು. ಮಹಿಳೆ ವೈದ್ಯರ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾಳೆ.

ಮಹಿಳೆಯೊಬ್ಬರು ಕಳೆದ ಮೂರು ತಿಂಗಳ ಹಿಂದೆ ಖಾಸಗಿ ಆಸ್ಪತ್ರೆಗೆ ಹೆರಿಗೆಗೆ ಎಂದು ದಾಖಲಾಗಿದ್ದರು. ಮಹಿಳೆಗೆ ನ.27ರಂದು ವೈದ್ಯರು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದರು. ಆದರೆ ಹೆರಿಗೆಯಾದ ವಾರದ ಬಳಿಕ ಮಹಿಳೆಗೆ ಹೊಟ್ಟೆ ನೋವು, ಜ್ವರ, ಕಾಲು ನೋವು ಕಾಣಿಸಿಕೊಂಡಿತ್ತು. ನೋವು ತಾಳಲಾರದೆ ಸ್ಕ್ಯಾನಿಂಗ್​ ಮಾಡಿಸಿದಾಗ ಮಹಿಳೆಯ ಹೊಟ್ಟೆಯಲ್ಲಿ ಅಸಹಜ ವಸ್ತುವಿರುವುದು ಕಂಡು ಬಂದಿತ್ತು.

ಇದನ್ನೂ ಓದಿ:ರಾಜ್ಯದ ಇತಿಹಾಸದಲ್ಲಿ ‌ಮೊದಲ ಬಾರಿಗೆ ವಿಧಾನಸೌಧದಲ್ಲಿ ಪುಸ್ತಕ ಮೇಳ ಆಯೋಜನೆ: ಯು.ಟಿ ಖಾದರ್​

ಆದರೆ ಆಸ್ಪತ್ರೆ ವೈದ್ಯರು ಅದೂ ನಮ್ಮಿಂದ ಆಗಿರುವ ತಪ್ಪಲ್ಲ. ಹೊಟ್ಟೆಯಲ್ಲಿರುವ ವಸ್ತು ಹೊರಗಿನಿಂದ ಬಂದಿರುವುದಲ್ಲ ಎಂದು ವಾದಿಸಿದ್ದರು. ಆದರೆ ಇದರ ಕುರಿತು ಮಂಗಳೂರು ಆಸ್ಪತ್ರೆಯಲ್ಲಿ ಮಹಿಳೆ ಪರೀಕ್ಷೆ ನಡೆಸಿದ್ದು. ಸಿಟಿ. ಸ್ಕ್ಯಾನ್​ ವೇಳೆ ಹೊರಗಿನ ವಸ್ತು ಹೊಟ್ಟೆಯಲ್ಲಿರುವುದು ಪತ್ತೆಯಾಗಿದೆ. ಮೂರು ತಿಂಗಳ ಬಳಿಕ ಮಹಿಳೆಗೆ ಮತ್ತೆ ಆಪರೇಶನ್​ ನಡೆಸಿದ್ದು. ಮಹಿಳೆಯ ಹೊಟ್ಟೆಯಲ್ಲಿದ್ದ ಬಟ್ಟೆಯನ್ನು ವೈದ್ಯರು ಹೊರಗೆ ತೆಗೆದಿದ್ದಾರೆ.

ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯ ಡಾ.ಅನಿಲ್​ ವಿರುದ್ದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದು. ಇಂಡಿಯನ್ ಮೆಡಿಕಲ್ ಕೌನ್ಸಿಲಿಗೂ ಘಟನೆ ಬಗ್ಗೆ ಮಹಿಳೆಯ ಪತು ಗಗನ್​ ದೀಪ್​ ದೂರು ನೀಡಿದ್ದಾರೆ.

RELATED ARTICLES

Related Articles

TRENDING ARTICLES