ಬಳ್ಳಾರಿ : ಬಳ್ಳಾರಿಯ ದಂತ ವೈದ್ಯ ಕಾಲೇಜಿನ ಕೊವಿಡ್ ಅಸ್ಪತ್ರೆಗೆ ಉಸ್ತುವಾರಿ ಮತ್ತು ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನಿಡಿದರು. ಪಿಪಿಇ ಕಿಟ್ ಧರಿಸಿ ಐಸೋಲೇಷನ್ ವಾರ್ಡ್ ಗೆ ಭೇಟಿ ಕೊಟ್ಟ ಸಚಿವರು ಕೊವಿಡ್ ಪೇಷೆಂಟ್ ಗಳ ಯೋಗಕ್ಷೇಮ ವಿಚಾರಿಸಿದರು. ಜೊತೆಗೆ ಧೈರ್ಯ ತುಂಬುವ ಮಾತುಗಳನ್ನಾಡಿದರು.
ಪ್ರಕೃತಿಯಿಂದ ಸೋಂಕು ಹೇಗೆ ಹರಡ್ತಿದೆ ಅಂತ ಗೊತ್ತಾಗ್ತಿಲ್ಲ. ಎಲ್ಲರೂ SMS ಪಾಲನೆ ಮಾಡ್ಬೇಕು ಅಂದ್ರು. ಸೋಷಿಯಲ್ ಡಿಸ್ಟನ್ಸ್, ಮಾಸ್ಕ್, ಸ್ಯಾನಿಟೈಸ್ ರೂಢಿ ಮಾಡಿಕೊಂಡರೆ ಆದಷ್ಟು ಹರಡುವಿಕೆ ಪ್ರಮಾಣ ಕಡಿಮೆ ಆಗುತ್ತೆ ಅಂತ ಸಚಿವರು ಹೇಳಿದರು.
ಜೊತೆಗೆ ಜಿಲ್ಲೆಯಲ್ಲಿ ಬೆಡ್ ಗಳ ಸಮಸ್ಯೆ ಬಗ್ಗೆ ಕೇಳಿ ಉತ್ತರಿಸಿದ ಸಚಿವ ಆನಂದ್ ಸಿಂಗ್, ಹಾಗೇನೂ ಇಲ್ಲ ನಾವು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೇವೆ. 1867 ಬೆಡ್ ರೆಡಿ ಇವೆ. ಎಲ್ಲ ರೀತಿಯ ಪರಿಶ್ರಮವನ್ನು ಜಿಲ್ಲಾಡಳಿತ ಪಡ್ತಿದೆ. ನಾವು ರೋಗಿಗಳಿಗೂ, ವೈದ್ಯರಿಗೂ ಸಹ ಮಾನಸಿಕವಾಗಿ ಧೈರ್ಯ ತುಂಬಬೇಕು ಎಂದರು.
ಅರುಣ್ ನವಲಿ ಪವರ್ ಟಿವಿ ಬಳ್ಳಾರಿ