ಬೀದರ್ : ಟೆಂಪೋ ಟ್ರಾವಲರ್ ಮತ್ತು ಬೈಕ್ ನಡುವೆ ಮುಖಾಮುಖಿಯಾಗಿ ಡಿಕ್ಕಿಯಾಗಿ ವೈದ್ಯನೋರ್ವ ಸಾವನ್ನಪ್ಪಿರುವ ಘಟನೆ ಬೀದರ್ನಲ್ಲಿ ನಡೆದಿದ್ದು. ಸಂತಪೂರ ನಿವಾಸಿ 41 ವರ್ಷದ ನೀಲಕಂಠ ಬೋಸ್ಲೆ ಎಂಬಾತ ಸಾವನ್ನಪ್ಪಿದ್ದಾನೆ.
ಔರಾದ್ ತಾಲೂಕಿನ ಮುಸ್ತಾಪುರ ಟೋಲ್ ನಾಕಾ ಬಳಿ ಅಪಘಾತ ಸಂಭವಿಸಿದ್ದು. ಮಹಾರಾಷ್ಟ್ರ ಕಡೆಯಿಂದ ಬರುತ್ತಿದ್ದ ಟೆಂಪೋ ಟ್ರಾವೆಲರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಹಾರಿ ಬಿದ್ದಿದ್ದು. ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಅಪಘಾತದ ನಂತರ ಟೆಂಪೋ ಟ್ರಾವಲರ್ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ.
ಇದನ್ನೂ ಓದಿ :ಟ್ರೋಲ್ ಆಗುತ್ತಿದ್ದಂತೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಐಐಟಿ ಬಾಬಾ
ಘಟನಾ ಸ್ಥಳಕ್ಕೆ ಸಂತಪೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಸಿಸಿಟಿವಿ ದೃಷ್ಯ ಪವರ್ ಟಿವಿಗೆ ಲಭ್ಯವಾಗಿದೆ.