ಮೈಸೂರು : ಉದಯಗಿರಿಯಲ್ಲಿ ನಡೆದ ಧಾಂದಲೆಯನ್ನು ವಿರೋಧಿಸಿ ಇಂದು ಮೈಸೂರಿನಲ್ಲಿ ಹಿಂದೂ ಸಂಘಟನೆಗಳು ಜನಜಾಗೃತಿ ಜಾಥಾ ನಡೆಸುತ್ತಿವೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಮುಖಾಮುಖಿಯಾಗಿದ್ದಾರೆ.
ಹೌದು.. ಬಿಜೆಪಿಯಲ್ಲಿ ಬಣ ಬಡಿದಾಟ ಎಲ್ಲರಿಗೂ ಹೊತ್ತಿರುವ ವಿಚಾರವೇ ಆಗಿದೆ. ಯತ್ನಾಳ್ ಬಣ ಮತ್ತು ವಿಜಯೇಂದ್ರ ಬಣ ಎರಡು ಬಣಗಳಾಗಿ ಬಡಿದಾಡುತ್ತಿದ್ದು. ಮಾಜಿ ಸಂಸದ ಪ್ರತಾಪ್ ಸಿಂಹ ಹೆಚ್ಚಾಗಿ ಯತ್ನಾಳ್ ಜೊತೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇಂದು ಮೈಸೂರಿನಲ್ಲಿ ನಡೆಯುತ್ತಿರುವ ಜನ ಜಾಗೃತಿ ಜಾಥದಲ್ಲಿ ವಿಜಯೇಂದ್ರ ಮತ್ತು ಪ್ರತಾಪ್ ಸಿಂಹ ಇಬ್ಬರು ಮುಖಾಮುಖಿಯಾಗಿದ್ದಾರೆ.
ಇದನ್ನೂ ಓದಿ :‘ಭಾರತ ಸೋಲುತ್ತೆ’ ಎಂದು ಬುರುಡೆ ಬಿಟ್ಟಿದ್ದ ಐಐಟಿ ಬಾಬನ ಭವಿಷ್ಯ ಸುಳ್ಳು
ಪರಸ್ಪರ ಕೈ ಕುಲುಕಿ ಮಾತನಾಡಿರುವ ಉಭಯ ನಾಯಕರು. ಲವಲವಿಕೆಯಿಂದ ಮಾತನಾಡಿದ್ದಾರೆ. ಪ್ರತಾಪ್ ಸಿಂಹ ಯತ್ನಾಳ್ ಬಣದೊಂದಿಗೆ ಗುರುತಿಸಿಕೊಂಡಿದ್ದರು ಹಾಗೂ ಅನೇಕ ಬಾರಿ ವಿಜಯೇಂದ್ರ ವಿರುದ್ದ ವಾಗ್ದಾಳಿ ನಡೆಸಿದ್ದರು. ಆದರೆ ಈ ಬೆಳವಣಿಗೆ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದ್ದು. ಬಿಜೆಪಿ ಹೈಕಮಾಂಡ್ ಏನಾದರೂ ಭಿನ್ನರು ಮತ್ತು ವಿಜಯೇಂದ್ರರ ನಡುವೆ ರಾಜಿ ಮಾಡಿಸಿದೆಯಾ ಎಂಬ ಕುತೂಹಲಕ್ಕೆ ಕಾರಣವಾಗಿದೆ.