Monday, February 24, 2025

ಪೋಕ್ಸೋ ಕೇಸ್​ ದಾಖಲಿಸಿದ ಪೊಲೀಸರು ಕಾಮನ್​ ಸೆನ್ಸ್​ ಉಪಯೋಗಿಸಬೇಕಿತ್ತು: ರಾಮಲಿಂಗ ರೆಡ್ಡಿ

ಬೆಳಗಾವಿ : ಮರಾಠಿ ಪುಂಡರಿಂದ ಹಲ್ಲೆಗೊಳಗಾಗಿದ್ದ ಬಸ್​ ಕಂಡೆಕ್ಟರ್​ನನ್ನು ಭೇಟಿಯಾದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ. ಕಂಡೆಕ್ಟರ್​ ವಿರುದ್ದ ದಾಖಲಿಸಿರುವ ಪೋಕ್ಸೋ ಕೇಸ್​ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪೋಕ್ಸೋ ದೂರು ಕೊಟ್ಟಾಗ ಪೊಲೀಸರು ಕಾಮನ್​ ಸೆನ್ಸ್​ ಉಪಯೋಗಿಸಬೇಕಿತ್ತು ಎಂದು ಹೇಳಿದ್ದಾರೆ.

ಹಲ್ಲೆಗೊಳಗಾದ ಕಂಡೆಕ್ಟರ್​​ ಆಸ್ಪತ್ರೆಗೆ ದಾಖಲಾಗಿದ್ದು. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ‘ಕಂಡಕ್ಟರ್ ಆರೋಗ್ಯ ಸ್ಥಿರವಾಗಿದೆ, ಏನು ತೊಂದರೆ ಇಲ್ಲ. ನಮ್ಮ ಎಂಡಿ, ಲೋಕಲ್ ಆಫೀಸರ್​ಗಳು ಕಂಡೆಕ್ಟರ್​ ಆರೋಗ್ಯ ವಿಚಾರಣೆ ಮಾಡ್ತಿದ್ದಾರೆ. ಅವರ ವಿರುದ್ದ ಪೋಕ್ಸೋ ಕೇಸ್​ ಹಾಕಿದ್ದಾರೆ ಎಂದು ಚಿಂತೆ ಮಾಡಿಕೊಂಡಿದ್ದಾರೆ. ಪೊಲೀಸರು ಕೂಡ ಏನು ಕಂಪ್ಲೇಟ್​ ಕೊಟ್ಟರು ತನಿಖೆ ಮಾಡುತ್ತಿದ್ದಾರೆ. ಅವರು ಇದರಲ್ಲಿಮ ಕಾಮನ್​ ಸೆನ್ಸ್​ ಉಪಯೋಗಿಸಬೇಕಿತ್ತು.

ಇದನ್ನೂ ಓದಿ :ಮಂತ್ರಾಲಯ ಭೇಟಿ ನೀಡಿ ರಾಯರ ದರ್ಶನ ಪಡೆದ ನಟ ಶಿವರಾಜಕುಮಾರ್ ದಂಪತಿ

65 ವರ್ಷಗಳಿಂದ ನಮ್ಮ ಇಲಾಖೆ ನೌಕರರ ಮೇಲೆ ರೀತಿಯ ದೂರು ಬಂದಿಲ್ಲ. ಉದ್ದೇಶಪೂರ್ವಕವಾಗಿ ಕೇಸ್ ಕೊಟ್ಟಿದ್ದಾರೆ. ಪೋಕ್ಸೋ ಕೇಸ್ ದಾಖಲಿಸಿದ ಅಧಿಕಾರಿಗಳ ಮೇಲೆ ಕ್ರಮದ ಬಗ್ಗೆ ಎಂಡಿ ಮಾತನಾಡಿದ್ದಾರೆ. ಆದರೆ ಎರಡು ರಾಜ್ಯದವರು ಬಸ್​ಗಳಿಗೆ ಮಸಿ ಬಳಿಯುವುದು ಅರ್ಥವಿಲ್ಲ. ಇದರಿಂದ ಎರಡು ರಾಜ್ಯದ ಸಾರಿಗೆಗೆ ನಷ್ಟ ಆಗುತ್ತೆ. ಇದೊಂದು ಕ್ಷುಲ್ಲಕ ವಿಚಾರ. ಈಗಾಗಲೇ ತಪ್ಪು ಮಾಡಿದವರನ್ನು ಅರೆಸ್ಟ್​ ಮಾಡಿ ಜೈಲಿಗೆ ಕಳುಹಿಸಿದ್ದಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES