ವಿಜಯಪುರ : ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದ ವೇದಿಕೆ ಮೇಲೆ ಮಾತನಾಡಿದ ಶಾಸಕ ಯತ್ನಾಳ. ಕುಟುಂಬ ರಾಜಕಾರಣದ ಕುರಿತು ಮತ್ತೆ ಗುಡುಗಿದ್ದು. ರಾಜಕೀಯಕ್ಕೆ ಹೊಸ ಜನರು ಬರಬೇಕಿದೆ. ಕೇವಲ ಅಪ್ಪ, ಮಕ್ಕಳು, ಮೊಮ್ಮಕ್ಕಳೆ ಇರೋದಲ್ಲ ಎಂದು ವಿಜಯೇಂದ್ರ ವಿರುದ್ದ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಸೇವಾಲಾಲ್ ಜಯಂತಿಯಲ್ಲಿ ಮಾತನಾಡಿದ ಯತ್ನಾಳ್ ‘ಇಂದು ರಾಜಕೀಯಕ್ಕೆ ಹೊಸ ಹೊಸ ಜನರು ಬರಬೇಕು.
ರಾಜಕೀಯದಲ್ಲಿ ಒಂದೇ ಕುಟುಂಬದವರು ಇರಬಾರದು. ಇಂದು ನಾನು ಅದರ ವಿರುದ್ದವೇ ಹೋರಾಟ ಮಾಡುತ್ತಿದ್ದೇನೆ. ರಾಜಕೀಯದಲ್ಲಿ ಕೇವಲ ಅಪ್ಪ, ಮಗ, ಮೊಮ್ಮಕ್ಕಳು ಇವೇ ಹಾಗಿವೆ. ಸಮಾಜದಲ್ಲಿ ಹೊಸ ಹೊಸ ಲೀಡರ್ಗಳು ಹುಟ್ಟಬೇಕು ಎಂದು ಹೇಳಿದರು.
ಇದನ್ನೂ ಓದಿ : ಕುಂಭಮೇಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ: 7 ಮಂದಿ ಕನ್ನಡಿಗರ ದುರ್ಮರಣ
ಮುಂದುವರಿದು ಮಾತನಾಡಿದ ಶಾಸಕ ಯತ್ನಾಳ್ ‘ಸೇವಾಲಾಲ್ ಮಹಾರಾಜರು ಪರಿಶ್ರಮದಿಂದ ದೇವರ ಸ್ಥಾನಕ್ಕೆ ಹೋದರು. ಬಂಜಾರಾ ಸಮಾಜದವರು ಒಗ್ಗಟ್ಟಿನಿಂದ ಇರಬೇಕು. ಕಲಬುರಗಿಯಲ್ಲಿ ಉಮೇಶ ಜಾಧವ ಅವರ ಚುನಾವಣೆಗೆ ನಾನು ಹೋಗಿದ್ದೆ, ಅವರು 25 ಸಾವಿರ ಮತಗಳಿಂದ ಸೋತರು. ನಾವು ದಿಲ್ಲಿಗೆ ಹೋದಾಗ ಸಕ್ಕರೆ ಕಾರ್ಖಾನೆ ವಿಚಾರವಾಗಿ ಹಗಲು ರಾತ್ರಿ ನಮ್ಮೊಟ್ಟಿಗೆ ಬಂದರು. ಅವರನ್ನು ಸೋಲಿಸಿದ್ದು ಬೇರೆ ಯಾರೋ ಹೊರಗಿನವರಲ್ಲ, ನಮ್ಲಲ್ಲೇ ಇರೋ ಕಳ್ಳನನ್ನ ಮಕ್ಕಳು.
ನಾನು ಯಾರಿಗೂ ಅಂಜುವ ಮಗಾ ಅಲ್ಲಾ. ಟಿವಿ, ಪೇಪರ್ದಲ್ಲಿ ರೊಕ್ಕ ಕೊಟ್ಟು ಏನು ಕಿಸಿದರು ನನಗೇನು ಕಸಿಯಕ್ಕೆ ಆಗಲ್ಲ. ನಾನು ಹಿಂಗೇ ಇರುವವನೇ, ಒಂದಿಲ್ಲ ಒಂದು ದಿನ ಕರ್ನಾಟಕದ ನಂಬರ್ ಒನ್ ಆಗುವವನೇ. ಕರ್ನಾಟಕದಲ್ಲಿ ಹೊಸ ಅಧ್ಯಾಯಾ ಶುರು ಮಾಡಬೇಕಿದೆ. ಅಪ್ಪ, ಮಕ್ಕಳು ಲೂಟಿ ಮಾಡಿ ತಿಂದು. ದುಬೈ, ಮಾರಿಷಸ್ನಲ್ಲಿ ಆಸ್ತಿ ಮಾಡಿದ್ದಾರೆ. ಇವರು ಭಾರತದ ಮಕ್ಕಳಲ್ಲ ಇವರು ಇಲ್ಲಿ ದುಡ್ಡು ಮಾಡಿ ಅಲ್ಲಿ ಹೋಗಿ ಹಣ ಸುರಿಯುತ್ತಾರೆ, ಇವರು ದುಬೈ ಮಕ್ಕಳು ಎಂದು ಹೇಳಿದರು.