Monday, February 24, 2025

ಹಸುವಿನ ಮೈಮೇಲೆ ಮೂಡಿಬಂದ ಪ್ರೇಮಿಗಳು: ಕಲಾವಿದನ ಕೈಚಳಕಕ್ಕೆ ಸಲಾಂ ಎಂದ ವೀಕ್ಷಕರು !

ಅಲ್ಲೊಬ್ಬ ತನ್ನ ಅತೀ ಬುದ್ದಿವಂತಿಕೆಯನ್ನು ಬಳಸಿಕೊಂಡು ಕ್ಷಣ ಮಾತ್ರದಲ್ಲಿ ಗಾಳದಿಂದ ಏಳೆಂಟು ಮೀನನ್ನು ಹಿಡಿದರೆ, ಇಲ್ಲೊಬ್ಬ ಅದ್ಭುತ ಕಲಾವಿದ ತನ್ನ ವಿಶೇಷ ಜ್ಞಾನವನ್ನು ಬಳಸಿ ಜೆರ್ಸಿ ಹಸುವನ್ನೆ ಪ್ರೇಮಿಗಳನ್ನಾಗಿ ಚಿತ್ರಿಸಿದ್ದಾನೆ ನೋಡಿ. ಜೆರ್ಸಿ ಹಸುವಿನ ಮೈಯಲ್ಲಿ ಮಿಂಚುತ್ತಿರುವ ಪ್ರೇಮಿಗಳ ಈ ವಿಡಿಯೋ ಇದೀಗ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ ಕಲಾವಿದನ ಈ ಟ್ಯಾಲೆಂಟ್​ ಕಂಡು ವೀಕ್ಷಕರು ಕೂಡ ಫಿದಾ ಆಗಿದ್ದಾರೆ.

ರವಿ ವರ್ಮನ ಕುಂಚದ ಕಲೆ ಬಲೆ ಸಾಕಾರವೋ.. ಕವಿ ಕಲ್ಪನೆ ಕಾಣುವ ಚೆಲುವಿನ ಜಾಲವೋ.. ಹೌದು ಇಲ್ಲಿ ಕಲಾವಿದನ ಕಲ್ಪನೆಯ ಪ್ರೇಮಿಗಳಿಬ್ಬರು ಜೆರ್ಸಿ ಹಸುವಿನ ಮೈಯಲ್ಲಿ ಮೂಡಿ ಬಂದಿರೋ ಬಗೆ ನೋಡಿದರೆ ಬಲೇ ಕಲಾವಿದ ಅಂತ ಕಲಾವಿದನ ಕಲಾವಂತಿಗೆಯ ಜ್ಞಾನಕ್ಕೆ ಒಂದು ಸೆಲ್ಯೂಟ್​ ಹೊಡೆಯೋಣ ಅನ್ನಿಸ್ತಾ ಇದೆ.

ಇದನ್ನೂ ಓದಿ :Champions Trophy 2025: ಮಿಂಚಿದ ಬೌಲರ್​ಗಳು, 241ಕ್ಕೆ ಸರ್ವಪತನ ಕಂಡ ಪಾಕ್​

ಜೆರ್ಸಿ ಹಸುವಿನ ಮುಂದಿನ ಕಾಲಿಗೆ ಹೆಣ್ಣಿನ ರೂಪ ಕೊಟ್ಟರೆ, ಹಿಂದಿನ ಕಾಲಿಗೆ ಗಂಡಿನ ರೂಪ ಕೊಟ್ಟಿದ್ದಾನೆ ಈ ಅದ್ಬುತ ಕಲಾವಿದ. ಜೆರ್ಸಿ ಹಸು ನಡ್ಕೊಂಡು ಹೋಗ್ತಿರ ಬೇಕಾದರೆ ಹೆಣ್ಣು ಮುಂದೆ ಹೋಗುತ್ತಿರುವ ಹಾಗೆ.. ಹಿಂದಿನಿಂದ ಗಂಡು ಹೂವಿನ ಬೊಕ್ಕೆಯನ್ನು ಹಿಡ್ಕೊಂಡು ಪ್ರೇಮ ನಿವೇಧನೆ ಮಾಡುತ್ತಾ ಹೆಣ್ಣಿನ ಹಿಂದಿಂದೆ ಬರುತ್ತಿರುವ ಹಾಗೆ ಮನೋಜ್ಞವಾಗಿ ಚಿತ್ರಿಸಿದ್ದಾನೆ. ಈ ವಿಡಿಯೋ ಇದೀಗ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಕಲಾವಿದನ ಕಲಾವಂತಿಕೆಗೆ ವೀಕ್ಷಕರು ಕೂಡ ಭಲೇ ಅಂದಿದ್ದಾರೆ.

RELATED ARTICLES

Related Articles

TRENDING ARTICLES