Sunday, February 23, 2025

ಮರಳುಗಾಡಿನಲ್ಲಿ ಭಾರತ-ಪಾಕ್​ ಹಣಾಹಣಿ: ಟಾಸ್​ ಗೆದ್ದ ಪಾಕ್​ ಬ್ಯಾಟಿಂಗ್​ ಆಯ್ಕೆ !

ಭಾರತ ಮತ್ತು ಪಾಕ್​ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು. ಎರಡು ತಂಡಗಳು ಜಿದ್ದಾಜಿದ್ದಿನ ಹೋರಾಟಕ್ಕೆ ಸಜ್ಜಾಗಿವೆ. ಟಾಸ್​ ಗೆದ್ದ ಪಾಕ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ.

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕ್​ ತಂಡಗಳೆರಡು ಚಾಂಪಿಯನ್​ ಟ್ರೋಫಿಯಲ್ಲಿ 5 ಬಾರಿ ಮುಖಾ-ಮುಖಿಯಾಗಿದ್ದು. ಅದರಲ್ಲಿ ಭಾರತ ತಂಡ 2 ಬಾರಿ ಗೆದ್ದಿದ್ದರೆ, 3 ಬಾರಿ ಪಾಕಿಸ್ತಾನದ್ದೇ ಮೇಲುಗೈ. ಅದರಲ್ಲೂ ಒಂದು ಬಾರಿ ಅಂತೂ ಫೈನಲ್ ನಲ್ಲೇ ಭಾರತ ತಂಡವನ್ನು ಸೋಲಿಸಿರುವ ಹೆಗ್ಗಳಿಕೆ ಪಾಕಿಸ್ತಾನದ್ದು. ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ಈ ಬಾರಿ ಹವಣಿಸುತ್ತಿದೆ.

ಎರಡು ತಂಡಗಳು ಸಂಭಾವ್ಯ ಪಟ್ಟಿ !

ಭಾರತ ತಂಡ :

ರೋಹಿತ್ ಶರ್ಮಾ (ನಾಯಕ), ಶುಭ್ಮನ್​ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್​ ರಾಣಾ, ಮೊಹಮ್ಮದ್ ಶಮಿ, ಹರ್ಶದೀಪ್​ ಸಿಂಗ್​, ರವೀಂದ್ರ ಜಡೇಜಾ, ರಿಷಬ್​ ಪಂತ್​, ವರುಣ್ ಚಕ್ರವರ್ತಿ.

ಪಾಕಿಸ್ತಾನ ತಂಡ :

ಮೊಹಮ್ಮದ್ ರಿಜ್ವಾನ್​ (ನಾಯಕ) (ವಿಕೇಟ್​ ಕೀಪರ್​), ಬಾಬರ್​ ಅಜಾಮ್​, ಇಮಾಮ್​-ಉಲ್​-ಹಕ್​, ಸೌದ್ ಶಕೀಲ್​, ದಯಾಬ್​ ತಾಹಿರ್​, ಖುಷ್ದಿಲ್​ ಷಾ, ಶಾಹಿನ್​ ಆಫ್ರೀದಿ, ನಸೀಮ್​ ಶಾ, ಹ್ಯಾರಿಸ್​ ರಾಫ್​, ಅಬ್ರಾರ್​ ಅಹ್ಮದ್​, ಕಮ್ರಾನ್​ ಗುಲಾಮ್​, ಫಹೀಮ್​ ಆಶ್ರಫ್​, ಮೊಹಮ್ಮದ್​ ಹಸ್ನೈನ್​, ಹುಸ್ಮಾನ್​ ಖಾನ್​.

RELATED ARTICLES

Related Articles

TRENDING ARTICLES