Sunday, February 23, 2025

ಪ್ರತಾಪ್​ ಸಿಂಹನನ್ನು ಯಾಕೆ ಒದ್ದು ಒಳಗೆ ಹಾಕಿಲ್ವೋ ಗೊತ್ತಿಲ್ಲ: ಪ್ರದೀಪ್​ ಈಶ್ವರ್​

ಬೆಂಗಳೂರು : ಮೈಸೂರು ಉದಯಗಿರಿ ದಾಂಧಲೆಯ ಕುರಿತು ಪ್ರತಾಪ್​ ಸಿಂಹ ಹೇಳಿಕೆ ಕುರಿತು ಲೇವಡಿ ಮಾಡಿದ ಶಾಸಕ ಪ್ರದೀಪ್​ ಈಶ್ವರ್​. ಪ್ರತಾಪ್​ ಸಿಂಹ ಒಬ್ಬ ಲಜ್ಜೆಗೆಟ್ಟ ಮಾಜಿ ಸಂಸದ, ಆತನನ್ನು ಇನ್ನು ಯಾಕೆ ಒದ್ದು ಒಳಗೆ ಹಾಕಿಲ್ವೋ ಗೊತ್ತಿಲ್ಲಾ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಂ ಕುರಿತು ಮಾಜಿ ಸಂಸದ ಪ್ರತಾಪ್​ ಸಿಂಹ ನೀಡಿದ ಹೇಳಿಕೆ ಕುರಿತು ಪ್ರದೀಪ್​ ಈಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದು. ‘ಪ್ರತಾಪ್ ಸಿಂಹ ಒಬ್ಬ ಲಜ್ಜೆಗೆಟ್ಟ ಮಾಜಿ ಸಂಸದ. ಸಂಸತ್​ ಒಳಗೆ ಹೊಗೆ ಬಾಂಬ್​ ಹಾಕಲು ಪಾಸ್​ ಕೊಟ್ಟ ನೀವೆಂತ ಅಯೋಗ್ಯ. ಪರಮೇಶ್ವರ್ ಬಗ್ಗೆ ಮಾತನಾಡುವಾಗ ಮಿತಿ ಇರಲಿ. ನಮ್ಮ ಧರ್ಮದ ಬಗ್ಗೆ ಮಾತನಾಡಿದರೆ ನಮಗೆ ಹೇಗೆ ರಕ್ತ ಕುದಿಯುತ್ತದೆಯೋ, ಅದೇ ರೀತಿ ಅವರ ಧರ್ಮದ ಬಗ್ಗೆ ಮಾತನಾಡಿದರೆ ಅವರು ಸುಮ್ನೇ ಇರಲ್ಲ.

ಇದನ್ನೂ ಓದಿ :ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತೆ, ಈ ಬಗ್ಗೆ ಖರ್ಗೆ ಅವರೇ ಹೇಳಿದ್ದಾರೆ: ಸತೀಶ್​ ಜಾರಕಿಹೊಳಿ

ನಮ್ಮ ಸಿಎಂಗೆ ಲಜ್ಜೆಗೆಟ್ಟವನು ಅಂತೀರಾ, ಪರಮೇಶ್ವರ್ ಬಗ್ಗೆ ಧಮ್ ತಾಕತ್ ಇದ್ಯಾ ಅಂತೀರ, ಆದರೆ ಇಷ್ಟೆಲ್ಲಾ ಅದರೂ ನಿಮ್ಮನ್ನ ಯಾಕೆ ಒದ್ದು ಒಳಗೆ ಹಾಕಿಲ್ವೋ ನನಗೆ ಇನ್ನೂ ಗೊತ್ತಿಲ್ಲ. ನಮ್ಮ ಸಾಹೇಬ್ರು ನಿಮ್ಮನ್ನು ಯಾಕೆ ಸುಮ್ಮನೆ ಬಿಟ್ಟಿದ್ದಾರೋ ಗೊತ್ತಿಲ್ಲ. ಪ್ರತಾಪ್​ ಸಿಂಹನ ಮೇಲೆ FIR ಆಗಿದೆ. ಈ ದೇಶಕ್ಕೆ ಮುಸ್ಲಿಂಮರ ಕೊಡುಗೆ ಇದೆ. ಅಬ್ದುಲ್ ಕಲಾಂರನ್ನ ಮಿಸೈಲ್ ಮ್ಯಾನ್ ಅಂತೇವೆ, ಅವರು ರಾಷ್ಟ್ರಪತಿಯಾಗಿದ್ದಾರೆ. ಅವರು ಮುಸ್ಲಿಂಮರಲ್ಲವೆ. ಮುಂದೆ ಜನರೇ ನಿಮಗೆ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಶಾಸಕ ಪ್ರದೀಪ್​ ಈಶ್ವರ್ ‘ ಆರ್​.ಅಶೋಕ್​ ಮತ್ತು ಸಿ,ಟಿ ರವಿ ದೊಡ್ಡ ಹಿಂದೂ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರೆಲ್ಲಾ ಡೋಂಗಿ ಹಿಂದುಗಳು. ನೀವು ಧರ್ಮ ಏನಾದ್ರೂ ಓದಿಕೊಂಡಿದ್ದರೆ. ಭಗವದ್ಗೀತೆ ಮೇಲೆ ಡಿಬೆಟ್​ ಮಾಡೋಣ ಬನ್ನಿ. ಮೂರು ಜನಕ್ಕೆ ಧಮ್​, ತಾಕತ್​ ಇದ್ದರೆ ಈ ಕುರಿತು ಓಪನ್​ ಡಿಬೆಟ್​ ಮಾಡೋಣ ಎಂದು ಪ್ರದೀಪ್​ ಈಶ್ವರ್ ಬಿಜೆಪಿಗರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

 

RELATED ARTICLES

Related Articles

TRENDING ARTICLES