ಹುಬ್ಬಳ್ಳಿ : ನಗರದಲ್ಲಿ ನಡೆಯುತ್ತಿರುವ ಅಂತರ್ ರಾಷ್ಟ್ರೀಯ ಗಾಳಿಪಟ ಉತ್ಸವದ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಗ್ಬಾಸ್ ವಿನ್ನರ್ ಹನುಮಂತು ಜೊತೆಗೂಡಿ ತತ್ವಪದ ಹಾಡಿದ್ದಾರೆ.
ಹೌದು.. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಅಂತರ್ರಾಷ್ಟ್ರಿಯ ಗಾಳಿಪಟ ಉತ್ಸವದ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿಗ್ಬಾಸ್ ವಿನ್ನರ್ ಹನುಮಂತು ಲಮಾಣಿ ತಂಡ ಪ್ರದರ್ಶನ ನೀಡುತ್ತಿತ್ತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವೇದಿಕೆ ಮೇಲೆ ಸಂತ ಶಿಶುನಾಳ ಶರೀಫರ ‘ತರವಲಾ ತಗಿ ನಿನ್ನ ತಂಬೂರಿ’ ಎಂಬ ತತ್ವಪದ ಹಾಡಿದ್ದಾರೆ.
ಇದನ್ನೂ ಓದಿ :‘ಕನ್ನಡ ಮಾತಾಡಿ’ ಎಂದ ಕಂಡೆಕ್ಟರ್ ಮೇಲೆ ಪೋಕ್ಸೋ ಕೇಸ್ ದಾಖಲಿಸಿದ ಪೊಲೀಸರು
ವೇದಿಕೆ ಮೇಲೆ ಹನುಮಂತುನನ್ನು ನೋಡಿದ ಜನರು ಜೋರಾಗಿ ಕೂಗುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದು. ಹನುಮಂತು ಕೂಡ ನೆರೆದಿದ್ದ ಜನರಿಗೆ ‘ಹಾಯ್ ಹುಲಿ’ ಎಂದು ನೆರೆದಿದ್ದ ಜನರತ್ತ ಕೈಬೀಸಿ ಧನ್ಯವಾದ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಹನುಮಂತು ಮತ್ತು ತಂಡ ಜನಪದ ಹಾಡುಗಳನ್ನು ಹಾಡುವ ಮೂಲಕ ಜನರನ್ನು ರಂಜಿಸಿದ್ದಾರೆ.