ಆನೇಕಲ್ : ಮಾನಸಿಕ ಅಸ್ವಸ್ಥೆ ಎಂಬ ಕಾರಣಕ್ಕೆ ಪತಿಯೊಬ್ಬ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ದೂಡಿ ಕೊಲೆ ಮಾಡಿರುವ ಘಟನೆ ಅನೇಕಲ್ನಲ್ಲಿ ನಡೆದಿದ್ದು. ಮೃತ ಮಹಿಳೆಯನ್ನು 40 ವರ್ಷದ ಮಂಜುಳಾ ಎಂದು ಗುರುತಿಸಲಾಗಿದೆ.
ಸರ್ಜಾಪುರದ ತಿಗಳ ಚೌಡದೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಮಂಜುಳಾ ಮತ್ತು ಮಂಜುನಾಥ್ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಪತ್ನಿ ಮಂಜುಳಾ ಮಾನಸಿಕವಾಗಿ ಅಸ್ವಸ್ಥಳಾಗಿದ್ದ ಕಾರಣ ಮಂಜುನಾಥ್ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಮದುವೆಯಾಗದ ಪುರಷರಿಂದ ಕಿರುಕುಳದ ಆರೋಪ: ಸಿಂಗಲ್ಸ್ಗಳಿಗಿಲ್ಲ ಮೃಗಾಲಯಕ್ಕೆ ಎಂಟ್ರಿ
ಕಳೆದ ರಾತ್ರಿ ಪತ್ನಿಯನ್ನು ಭುಜದ ಮೇಲೆ ಹೊತ್ತೊಯ್ದಿರುವ ಪತಿ ಮಂಜುನಾಥ್, ನಿರ್ಮಾಣ ಹಂತದ ಕಟ್ಟಡ ಮೇಲೆ ಹೋಗಿದ್ದಾನೆ. ಕಟ್ಟಡದ ಎರಡನೇ ಮಹಡಿಯಿಂದ ಪತ್ನಿಯನ್ನು ಕೆಳಗೆ ನೂಕಿದ್ದಾನೆ. ಕೆಳಗೆ ಬಿದ್ದ ಮಂಜುಳಾ ತಲೆಗೆ ಗಂಭೀರವಾಗಿ ಗಾಯವಾಗಿದ್ದು. ಸ್ಥಳೀಯರು ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.