ಕಲಬುರಗಿ : ವಿಧಾನ ಪರಿಷತ್ ಸದಸ್ಯೆ ಬಿ.ಕೆ ಹರಿಪ್ರಸಾದ್ ಮೈಸೂರಿನ ಉದಯಗಿರಿ ಧಾಂದಲೆ ಕುರಿತು ಹೇಳಿಕೆ ನೀಡಿದ್ದು. ಮೈಸೂರಿನ ಘಟನೆ ಬಿಜೆಪಿ, ಆರ್ಎಸ್ಎಸ್ನವರ ಕೃಪಪೋಷಿತ ನಾಟಕವಾಗಿದೆ. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಎಂದು ನಾವು ಹೇಳಿದ್ದೇವೆ. ಆದರೆ ಇವರು ಬುರ್ಕಾ ಹಾಕೋಂಡು ಗಲಾಟೆ ಮಾಡುತ್ತಾರೆ ಎಂದು ಹೇಳಿದರು.
ಕಲಬುರಗಿಯಲ್ಲಿ ಮಾತನಾಡಿದ ಬಿ.ಕೆ ಹರಿಪ್ರಸಾದ್ ‘ಮೈಸೂರಿನ ಉದಯಗಿರಿ ಗಲಾಟೆ ಬಿಜೆಪಿ ಮತ್ತು ಆರ್ಎಸ್ ಎಸ್ ಕೃಪಾಪೋಷಿತ ಕೃತ್ಯಗಳು. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಅಂತಾ ಹೇಳಿದ್ದೆವೆ. ಆದರೆ
ಶಾಂತಿ ಕದಡಲು ಬಹಳ ಪ್ರಯತ್ನ ಮಾಡ್ತಿದ್ದಾರೆ. ಬಿಜೆಪಿ ಅಧಿಕಾರ ಇದ್ದಾಗ ಸೃಷ್ಟಿಯಾದ ಅಶಾಂತಿಯ ವಾತಾವರಣದ ಕೇವಲ ಎರಡೇ ತಿಂಗಳಲ್ಲಿ ಕಡಿಮೆಯಾಗಿದೆ.
ಇದನ್ನೂ ಓದಿ :‘ದಿ ಡೆವಿಲ್’ ಸಿನಿಮಾ ಟೀಸರ್ ಬಿಡುಗಡೆ: ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ !
ನಾನು ಗೃಹ ಸಚಿವರಿಗೆ ಹೇಳೋದು ಇಷ್ಟೆ, ಯಾರೆ ಆಗಲಿ ಯಾವ ಧರ್ಮ ಜಾತಿ ಭಾಷೆ ಹೆಸರಲ್ಲಿ ಶಾಂತಿ ಕದಡಿದ್ರೆ ಕಾನೂನಿನ ಮೂಲಕ ಕಠಿಣ ಕ್ರಮ ತೆಗೆದುಕೊಳ್ಳಬೇಕು. ವಿಜಯಪುರದಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದವನು ಸಂಘ ಪರಿವಾರದವನು. ಸಂಘ ಪರಿವಾರದವರು ಕೆಲವು ಕಡೆ ಬುರ್ಖಾ ಹಾಕೊಂಡು ಹೋಗಿ ಬಿಡ್ತಾರೆ ಗಲಾಟೆ ಮಾಡೋದಕ್ಕೆ. ಅವರಿಗೇನು ಇದು ಹೊಸದಲ್ಲ. ಅವರ ಎಲ್ಲಾ ಚಿಂತನೆಗಳು ಅನುಷ್ಟಾನ ತರೋದಕ್ಕೆ ಪ್ರಯತ್ನ ಮಾಡ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಅದು ಸಾಧ್ಯವಲ್ಲ. ಈ ಕುರಿತು ನನ್ನ ಬಳಿ ವಿಡಿಯೋ ಇದೆ. ಇವರೆ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.