ವಿಜಯಪುರ : ಜಿಲ್ಲೆಯ ಕೊಲ್ಹಾರ ಬಳಿಯ ಕೃಷ್ಣಾನದಿಯ ಸೇತುವೆ ಮೇಲಿಂದ ಲಾರಿಯೊಂದು ನದಿಗೆ ಉರುಳಿ ಬಿದ್ದಿದ್ದು. ಈ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು. ಮತ್ತೊರ್ವನಿಗೆ ಗಂಭೀರವಾದ ಗಾಯವಾಗಿದೆ ಎಂದು ತಿಳಿದು ಬಂದಿದೆ.
ವಿಜಯಪುರ ಜಿಲ್ಲೆಯ, ಕೊಲ್ಹಾರ ಪಟ್ಟಣದ ಹೊರ ಭಾಗದಲ್ಲಿರೋ ಕೃಷ್ಣಾನದಿಯ ಸೇತುವೆ ಬಳಿ ಘಟನೆ ನಡೆದಿದ್ದು. ಕೃಷ್ಣ ನದಿಗೆ ಅಡ್ಡಲಾಗಿ ಸುಮಾರಿ 3ಕಿ.ಮೀ ಉದ್ದದ ಬೃಹತ್ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಸೇತುವೆ ಮೇಲೆ ಚಲಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಲಾರಿ ಸೇತುವೆಯ ತಡಗೋಡೆಗೆ ಡಿಕ್ಕಿಯಾಗಿ ನದಿಗೆ ಉರುಳಿದೆ.
ಇದನ್ನ ಓದಿ : ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಾಲಿ ಧನಂಜಯ್-ಡಾಕ್ಟರ್ ಧನ್ಯತಾ
ಅಪಘಾತದಲ್ಲಿ 30 ವರ್ಷದ ಟಿಪ್ಪರ್ ಕ್ಲೀನರ್ ಪರುಶರಾಮ್ ಹೊಸಮನಿ ಸ್ಥಳದಲ್ಲೆ ಸಾವನ್ನಪ್ಪಿದ್ದು. ಟಿಪ್ಪರ್ ಚಾಲಕ 32 ವರ್ಷದ ಸಚಿನ್ ರಾಠೋಡ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದು. ಘಟನಾ ಸ್ಥಳಕ್ಕೆ ಕೊಲ್ಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.