ಬಿಹಾರ : ಮದುವೆ ಆರ್ಕೇಸ್ಟ್ರದಲ್ಲಿ ನೃತ್ಯ ಮಾಡುತ್ತಿದ್ದ ಯುವತಿಯ ಮೇಲೆ ಯುವಕನಿಗೆ ಪ್ರೀತಿಯಾಗಿ, ವೇದಿಕೆಯ ಮೇಲೆ ತೆರಳಿ ಆಕೆಯ ಹಣೆಗೆ ಸಿಂಧೂರವಿಟ್ಟು ಅಲ್ಲೆ ಮದುವೆಯಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಪ್ರಸ್ತುತ ಬಿಹಾರದಲ್ಲಿ ಮದುವೆಗಳ ಸೀಸನ್ ನಡೆಯುತ್ತಿದೆ. ಮದುವೆಯಲ್ಲಿ ಅತಿಥಿಗಳನ್ನು ರಂಜಿಸಲು ಆರ್ಕೆಸ್ಟ್ರಾವನ್ನು ಆಯೋಜಿಸಲಾಗಿತ್ತು. ಈ ಆರ್ಕೆಸ್ಟ್ರಾದಲ್ಲಿ ಒಬ್ಬ ಹುಡುಗಿ ನೃತ್ಯ ಮಾಡುತ್ತಿದ್ದಳು. ಆ ಯುವಕನಿಗೆ ಈ ಹುಡುಗಿ ಮೊದಲ ನೋಟದಲ್ಲೇ ಇಷ್ಟವಾಯಿತು. ಆ ಯುವಕ ಆ ಹುಡುಗಿಯಿಂದ ತುಂಬಾ ಪ್ರಭಾವಿತನಾದನು, ಅವನು ತಡಮಾಡದೆ ವೇದಿಕೆಯ ಮೇಲೆ ಹತ್ತಿ ಎಲ್ಲರ ಮುಂದೆ ಆ ಹುಡುಗಿಯ ಹಣೆಗೆ ಸಿಂಧೂರವನ್ನು ಇಟ್ಟು ಆಕೆಯನ್ನು ಪತ್ನಿಯಾಗಿ ಸ್ವೀಕರಿಸಿದ್ದಾನೆ.
ಇದನ್ನೂ ಓದಿ :ದಕ್ಷಿಣದಲ್ಲಿ ಬಿಜೆಪಿ ಅಧಿಕಾರದಲಿಲ್ಲ, ಅದಕ್ಕೆ ನಮಗೆ ಅನ್ಯಾಯವಾಗುತ್ತಿದೆ: ಡಿಕೆ.ಸುರೇಶ್
वीडियो में देखिए डांसर शादी से कितनी खुश है? pic.twitter.com/xZpDd7pkAR
— ShivRaj Yadav (@shivaydv_) February 13, 2025
ಈ ವಿಡಿಯೋದಲ್ಲಿ ಹುಡುಗಿಯ ಪ್ರತಿಕ್ರಿಯೆಯೂ ದಾಖಲಾಗಿದೆ. ಯುವಕ ಸಿಂಧೂರ ಹಚ್ಚಿದ್ದರಿಂದ ಆಕೆ ಕೆಲ ಕ್ಷಣ ಗಾಬರಿಗೊಂಡತೆ ಕಂಡರು ನಂತರ ಆಕೆ ನಡೆದ ಘಟನೆಯಿಂದ ಸಂತಸಗೊಂಡಳು. ವಿಡಿಯೋದಲ್ಲಿ ಆಕೆ ನಗುತ್ತಿರುವ ಮತ್ತು ನಾಚುತ್ತಿರುವುದನ್ನು ದೃಷ್ಯಗಳನ್ನು ತೋರಿಸಲಾಗಿದೆ.
ಈ ವಿಡಿಯೋ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಆಗುತ್ತಿದ್ದಂತೆ, ನೆಟ್ಟಿಗರು ನವವಿವಾಹಿತ ದಂಪತಿಗೆ ಶುಭ ಹಾರೈಸಿದರು. ಅವರು ಡ್ಯಾನ್ಸರ್ ಮತ್ತು ಅವಳನ್ನು ಮದುವೆಯಾದ ವ್ಯಕ್ತಿಗೆ ಆಶೀರ್ವದಿಸಿದರು. ಜನರು ಹುಡುಗನ ಧೈರ್ಯವನ್ನು ಹೊಗಳುತ್ತಿದ್ದಾರೆ. ಆರ್ಕೆಸ್ಟ್ರಾದಲ್ಲಿ ನೃತ್ಯ ಮಾಡುವ ಹುಡುಗಿಯರನ್ನು ಜನರು ತಪ್ಪು ದೃಷ್ಟಿಕೋನದಿಂದ ನೋಡುತ್ತಾರೆ, ಆದರೆ ಈ ಯುವಕ ಆ ಹುಡುಗಿಯನ್ನು ತನ್ನ ಹೆಂಡತಿಯನ್ನಾಗಿ ಮಾಡಿಕೊಳ್ಳುವ ಮೂಲಕ ಅವಳಿಗೆ ಗೌರವ ನೀಡಿದ್ದಾನೆ ಎಂದು ಹಲವರು ಹೇಳುತ್ತಾರೆ. ಇದು ನಿಜಕ್ಕೂ ಶ್ಲಾಘನೀಯ. ಆದಾಗ್ಯೂ, ವೈರಲ್ ವಿಡಿಯೋ ಬಿಹಾರದ ಯಾವ ಜಿಲ್ಲೆಯಿಂದ ಬಂದಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಾಗಿಲ್ಲ. ಹುಡುಗನ ಬಗ್ಗೆಯೂ ಯಾವುದೇ ಮಾಹಿತಿ ಸಿಕ್ಕಿಲ್ಲ.