ಮಾಸ್ಕೋ: ರಷ್ಯಾದ ಬಿಯರ್ ಕಂಪನಿಯೊಂದು ಬಿಯರ್ ಬಾಟೆಲ್ಗಳ ಮೇಲೆ ಭಾರತದ ರಾಷ್ಟ್ರಪಿತ ಗಾಂಧಿಜಿ ಅವರ ಭಾವಚಿತ್ರವನ್ನು ಮುದ್ರಿಸಿ ಮಾರಾಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಘಟನೆ ಕುರಿತು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :389 ರೂಗೆ ಸಿಗಲಿದ್ದಾನೆ ಬಾಯ್ಫ್ರೆಂಡ್: ಪ್ರೇಮಿಗಳ ದಿನದಂದು ಮತ್ತೊಂದು ಉದ್ಯಮ ಆರಂಭ !
ಹೌದು.. ರಷ್ಯಾ ಬ್ರೂವರೀಸ್ ಕಂಪನಿ ತಯಾರಿಸುವ ಬಿಯರ್ ಬಾಟಲ್‌ಗಳಲ್ಲಿ ಗಾಂಧೀಜಿ ಅವರ ಭಾವಚಿತ್ರ ಹಾಗೂ ಸಹಿ ಇರುವುದು ಕಂಡುಬಂದಿದೆ. ಬಿಯರ್ ಬಾಟಲ್ ಪ್ರದರ್ಶಿಸುವ ವೀಡಿಯೋ ಇನ್‌ಸ್ಟಗ್ರಾಮ್‌ನಲ್ಲಿ ವೈರಲ್ ಆಗಿದೆ.
ಈ ಕುರಿತು ಸಾಮಾಜಿಕ ಹೋರಾಟಗಾರ್ತಿ ಶ್ರೀ. ಸುಪರ್ಣೋ ಸತ್ಪತಿ ಅವರು ಟ್ವಿಟರ್ನಲ್ಲಿ ಪೋಟೊ ಹಂಚಿಕೊಂಡಿದ್ದು ಪ್ರಧಾನಿ ಮೋದಿ ಅವರು ಈ ಕುರಿತು ಪರಿಶೀಲನೆ ನಡೆಸಬೇಕು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ಪುಟಿನ್ ಕುರಿತು ಚರ್ಚಿಸಬೇಕು ಒತ್ತಾಯಿಸಿದ್ದಾರೆ.