Wednesday, February 12, 2025

‘ಮೊಬೈಲ್ ಬಿಟ್ಟು ಓದ್ಕೋ’ ತಾಯಿಯ ಮಾತಿನಿಂದ ಮನನೊಂದ ಬಾಲಕಿ ಆತ್ಮಹ*ತ್ಯೆ !

ಬೆಂಗಳೂರು : ‘ಪರೀಕ್ಷೆ ಹತ್ತಿರಬರುತ್ತಿದೆ, ಮೊಬೈಲ್​ ಬಿಟ್ಟು ಓದ್ಕೋ’ ತಾಯಿ ಬುದ್ದಿ ಹೇಳಿದ್ದಕ್ಕೆ ಮನನೊಂದ ಬಾಲಕಿಯೊಬ್ಬಳು ಅಪಾರ್ಟಮೆಂಟ್​ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಮೃತ ವಿದ್ಯಾರ್ಥಿನಿಯನ್ನು 15 ವರ್ಷದ ಅವಂತಿಕಾ ಚೌರಾಸಿಯಾ ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ನಮ್ಮ ಯುವ ಸಮುದಾಯ ಸಣ್ಣ, ಪುಟ್ಟ ವಿಚಾರಗಳಿಗೂ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದು. ಇದೀಗ ಮತ್ತೋರ್ವ ಬಾಲಕಿ ಅರ್ಪಾಟ್​ಮೆಂಟ್​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ​ಕಾಡುಗೋಡಿಯ ಅಸೆಟ್ಸ್​ಮಾರ್ಕ್ ಅಪಾರ್ಟ್​ಮೆಂಟ್​ನಲ್ಲಿ ಘಟನೆ ನಡೆದಿದ್ದು. ತಾಯಿ ‘ಪರೀಕ್ಷೆ ಹತ್ತಿರ ಬರುತ್ತಿದೆ, ಮೊಬೈಲ್​ ಬಿಟ್ಟು ಓದ್ಕೋ’ ಎಂದು ಹೇಳಿದ್ದಕ್ಕೆ ಮನನೊಂದ ಅವಂತಿಕಾ ಚೌರಾಸಿಯಾ ಅಪಾರ್ಟ್​ಮೆಂಟ್​ನ 20ನೇ ಪ್ಲೋರ್​ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇದನ್ನೂ ಓದಿ : ಚಲಿಸುತ್ತಿದ್ದ ಬಸ್​ನಿಂದ ಕೆಳಗೆ ಬಿದ್ದು ವಿದ್ಯಾರ್ಥಿ ಸಾ*ವು

ಘಟನಾ ಸ್ಥಳಕ್ಕೆ ಕಾಡುಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ವಿದ್ಯಾರ್ಥಿನಿ SSLC ಓದುತ್ತಿದ್ದಳು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES