ಬಳ್ಳಾರಿ : ಮಾಜಿ ಸಚಿವ ಶ್ರೀರಾಮುಲು ಬಯಲಾಟ ಪಾತ್ರಧಾರಿಗಳ ಜೊತೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದು. ಶ್ರೀರಾಮುಲು ಕುಣಿತಕ್ಕೆ ನೆರೆದಿದ್ದ ಜನರು ಚಪ್ಪಾಳೆ, ಶಿಳ್ಳೆಮ ಮೂಲಕ ಪ್ರೋತ್ಸಹಿಸಿದ್ದಾರೆ.
ಬಯಲಾಟ ಕರ್ನಾಟಕ ಜನಪದ ಕಲೆಗಳಲ್ಲಿ ಅತ್ಯಂತ ವೈವಿಧ್ಯದಿಂದ ಕೂಡಿದ ಗಂಡುಕಲೆ. ಇದರಲ್ಲಿ ಸಾಹಿತ್ಯ ಸಂಗೀತ, ನೃತ್ಯಗಳು ಮುಪ್ಪುರಿಗೊಂಡಿವೆ. ಪ್ರಾಚೀನ ಕಾಲದಿಂದಲೂ ಗ್ರಾಮೀಣರಿಗೆ ಮನರಂಜನೆ ಒದಗಿಸಿಕೊಂಡು ಬರುತ್ತಿರುವ ಹವ್ಯಾಸಿ ಕಲೆ ಬಯಲಾಟ. ಸಾಮಾನ್ಯವಾಗಿ ಸುಗ್ಗಿ ಕೆಲಸ ಮುಗಿದ ಮೇಲೆ ‘ಬಯಲಾಟ’ಗಳ ಸುಗ್ಗಿ ಆರಂಭವಾಗುತ್ತದೆ. ಈ ಬಯಲಾಟ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಶ್ರೀರಾಮುಲು ಪಾತ್ರಧಾರಿಗಳೊಂದಿಗೆ ಹೆಜ್ಜೆ ಹಾಕಿದ್ದಾರೆ.
ಇದನ್ನೂ ಓದಿ :ಮನೆ ಕಟ್ಟಬೇಕೆನ್ನುವ ವೃದ್ದೆಯ ಆಸೆಯನ್ನು ಈಡೇರಿಸಿದ ಶಾಸಕ ಭರತ್ ರೆಡ್ಡಿ
ಗಣಿಜಿಲ್ಲೆ ಬಳ್ಳಾರಿಯ ಗ್ರಾಮಾಂತರ ಕ್ಷೇತ್ರವಾದ ಹರಗಿನದೊಣಿಯಲ್ಲಿ ಬಯಲಾಟ ಆಯೋಜನೆ ಮಾಡಲಾಗಿತ್ತು. ಊಈ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಶ್ರೀರಾಮುಲು ಪಾತ್ರಧಾರಿಗಳೊಂದಿಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಮಾತನಾಡಿದ ಶ್ರೀರಾಮುಲು ‘ ಬಯಲಾಟ, ನಾಟಕಗಳು ಈ ಮಣ್ಣಿನ ಸ್ವಭಾವವನ್ನು ತೋರುತ್ತವೇ, ಸಾಮರಸ್ಯವಾಗಿ ಸಾರ್ವಜನಿಕರು ಬೇರೆತು ಮನೋರಂಜನೆ ಪಡೆಯುವುದು ಈ ನಾಟಕಗಳಿಂದ. ನಾಟಕಗಳಲ್ಲಿ ಸಾಮಾಜಿಕ ಕಳಕಳಿಯು, ಕಲೆಯು ಅಡಗಿರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಪಾತ್ರಧಾರಗಳಿಗೆ ಶುಭ ಹಾರೈಸಿದರು.