ವಿಜಯಪುರ : ಈಗಿನ ಕಾಲದ ಯುವಕರು ಅದ್ದೂರಿಯಾಗಿ ಮದುವೆಯಾಗಬೇಕು ಎಂದು ಕನಸು ಕಾಣುತ್ತಾರೆ. ಆದರೆ ಇಲ್ಲೊಂದು ಯುವ ಜೋಡಿ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಸರಳವಾಗಿ ಮದುವೆಯಾಗಿದ್ದು. ಮನೆಯವರ ವಿರೋಧದ ಕಾರಣ ಈ ರೀತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ವಿಜಯಪುರ ಜಿಲ್ಲೆಯ, ಮುದ್ದೇಬಿಹಾಳ ತಾಲೂಕಿನ ಲೇಬಗೇರಿ ಗ್ರಾಮದ ಯುವಕ ಸಂಗಮೇಶ ತಳವಾರ (24) ಹಾಗೂ ಬಾಗಲಕೋಟೆ ಜಿಲ್ಲೆಯ ಕಡ್ಲಿಮಟ್ಟಿ ಗ್ರಾಮದ ಯುವತಿ ಶಿವಾನಿ ಕಡ್ಲಿಮಟ್ಟಿ (22) ವಿವಾಹವಾಗಿದ್ದು. ಈ ಜೋಡಿಗಳು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ ಇವರಿಬ್ಬರ ಮದುವೆಗೆ ಯುವತಿಯ ಕುಟುಂಬಸ್ಥರು ಬಿಲ್ಕುಲ್ ಒಪ್ಪಿರಲಿಲ್ಲ.
ಇದನ್ನೂ ಓದಿ :ಇವಿಎಂ ಡೇಟಾ ಅಳಿಸದಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ
ಆದರೆ ಸಾಕಷ್ಟು ವಿರೋಧದ ಮಧ್ಯೆಯು ನವ ಜೋಡಿಗಳು ಸರಳ ಮದುವೆ ಮಾಡಿಕೊಂಡು ನವಜೀವನಕ್ಕೆ ಕಾಲಿಟ್ಟಿದ್ದು. ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ಮುಖಂಡರ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಸರಳವಾಗಿ ಮದುವೆ ಮಾಡಿಕೊಂಡು ನವಜೀವನಕ್ಕೆ ಕಾಲಿಟ್ಟಿದ್ದಾರೆ.