Wednesday, February 12, 2025

ಕುಂಭಮೇಳದಿಂದ ವಾಪಾಸಾಗುವ ವೇಳೆ ಭೀಕರ ಅಪಘಾತ: 9 ಮಂದಿ ಸಾ*ವು

ಮಧ್ಯಪ್ರದೇಶ: ಪ್ರಯಾಗ್​ನಲ್ಲಿ ನಡೆಯುತ್ತಿರುವ ಕುಂಭಮೇಳದಿಂದ ಹಿಂತಿರುಗುತ್ತಿದ್ದ ವೇಳೆ ಎರಡು ಪ್ರತ್ಯೇಕ ಅಪಘಾತದಲ್ಲಿ 9 ಜನರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು. ಮಧ್ಯಪ್ರದೇಶದ ಜಬಲ್ಪುರ ಮತ್ತು ಮೈಹಾರ್​ ಜಿಲ್ಲೆಗಳಲ್ಲಿ ಅಪಘಾತ ಸಂಭವಿಸಿದೆ.

ಜಬಲ್‌ಪುರದಲ್ಲಿ ಟೆಂಪೂ ಟ್ರಾವಲರ್​ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ ಆಂಧ್ರಪ್ರದೇಶಕ್ಕೆ ಹಿಂತಿರುಗುತ್ತಿದ್ದ 7 ಜನರು ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಜಿಲ್ಲಾಧಿಕಾರಿ ದೀಪಕ್​ ಕುಮಾರ್​ ಸಕ್ಸೇನಾ ಮಾಹಿತಿ ನೀಡಿದ್ದು. ಜಿಲ್ಲಾ ಕೇಂದ್ರದಿಂದ 65 ಕಿ.ಮೀ ದೂರದಲ್ಲಿರುವ ಸಿಹೋರ ಪಟ್ಟಣದ ಬಳಿ ಬೆಳಿಗ್ಗೆ 8:30ರ ಸುಮಾರಿಗೆ ಅಪಘಾತದ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಸ್ವರ್ಗದಿಂದ ಧರೆಗಿಳಿದು ಬಂದ ಕೃಷ್ಣಮೃಗವನ್ನು ನೋಡಿ ಜನರು ಪುಲ್​ ಖುಷ್​ !

ಟ್ರಕ್ ತಪ್ಪು ರಸ್ತೆಯ ಹೆದ್ದಾರಿಯಲ್ಲಿ ಹೋಗುತ್ತಿದ್ದ ಕಾರಣ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಏಳು ಜನರು ಸ್ಥಳದಲ್ಲೇ ಸಾವನ್ನಪ್ಪಿದರು, ಮತ್ತು ಇನ್ನೂ ಅನೇಕರು ಮಿನಿ ಬಸ್‌ನೊಳಗೆ ಸಿಲುಕಿಕೊಂಡರು ಎಂದು ಅವರು ವಿವರಿಸಿದ್ದಾರೆ.

ಅಪಘಾತ: 02

ಇನ್ನೂ ಮೈಹಾರ್‌ನಲ್ಲಿ, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 30 ರ ಕಾಂಚನಪುರ ಗ್ರಾಮದ ಬಳಿ ಬೆಳಿಗ್ಗೆ 4 ಗಂಟೆ ಸುಮಾರಿಗೆ ಅಪರಿಚಿತ ವಾಹನವೊಂದು ಎಸ್‌ಯುವಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಐದು ಮಂದಿ ಗಾಯಗೊಂಡಿದ್ದಾರೆ ಎಂದು ನಾದನ್ ದೇಹತ್ ಪೊಲೀಸ್ ಠಾಣೆಯ ಉಸ್ತುವಾರಿ ಕೆ.ಎನ್. ಬಂಜಾರೆ ತಿಳಿಸಿದ್ದಾರೆ. ಮೃತರನ್ನು  ಮಂಜು ಶರ್ಮಾ (32) ಮತ್ತು ಮನೋಜ್ ವಿಶ್ವಕರ್ಮ (42) ಎಂದು ಗುರುತಿಸಲಾಗಿದೆ.

 

RELATED ARTICLES

Related Articles

TRENDING ARTICLES