ದೆಹಲಿ : ಮೈಸೂರಿನ ಉದಯಗಿರಿಯಲ್ಲಿ ಕಳೆದ ರಾತ್ರಿ ನಡೆದ ದಾಂಧಲೆ ಬಗ್ಗೆ ದೆಹಲಿಯಲ್ಲಿ ಮಾಧ್ಯದದ ಜೊತೆ ಮಾತನಾಡಿದ ಸಂಸದ ಬಸವರಾಜ್ ಬೊಮ್ಮಾಯಿ ಸರ್ಕಾರದ ವಿರುದ್ದ ವಾಗ್ದಳಿ ನಡೆಸಿದ್ದು. ಅಮಾಯಕರು ಎಂದು ಸರ್ಕಾರ ಕೇಸ್ ವಾಪಾಸ್ ಪಡೆಯಿತು. ಇದರಿಂದ ಪ್ರೋತ್ಸಹಗೊಂಡು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಒಂದು ವರ್ಗದ ಸಂಘಟನೆ ವ್ಯವಸ್ಥೆಯನ್ನು ಚಾಲೆಂಜ್ ಮಾಡುತ್ತಿದೆ. ರಾಜ್ಯದಲ್ಲಿ ಪಿಎಫ್‌ಐ ಬ್ಯಾನ್ ಆಗಿದೆ, ಆದರೂ ಬೇರೆ ಬೇರೆ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ರಾತ್ರಿ ನಡೆದಿರುವ ಘಟನೆ ರಾಜ್ಯದ ಹಿಂದಿನ ಘಟನೆಗಳೊಂದಿಗೆ ಸಾಮ್ಯತೆ ಹೊಂದಿದೆ.
ಇದನ್ನೂ ಓದಿ :ಸೇತುವೆ ಮೇಲಿಂದ ಕೆಳಗೆ ಉರುಳಿದ ಬಸ್: 53ಕ್ಕೂ ಹೆಚ್ಚು ಜನರ ಸಾ*ವು !
ಇಂತಹ ಕೆಲಸ ಮಾಡಿದವರ ಮೇಲಿನ ಕೇಸ್ಗಳನ್ನು ಸರ್ಕಾರ ವಾಪಾಸ್ ಪಡೆದಿದೆ. ಅವರು ಅಮಾಯಕರು ಎಂದು ಹೇಳಿದೆ. ಅದರಿಂದ ಪ್ರೊತ್ಸಾಹಗೊಂಡ ಶಕ್ತಿಗಳು ಮತ್ತೆ ದಾಳಿ ಮಾಡಿದೆ. ಡಿಸಿಪಿ ಕಾರ್ ಮೇಲೆ ದಾಳಿ ಮಾಡುವ ಧೈರ್ಯ ಬಂದಿದೆ. ಸರ್ಕಾರ ಮತ್ತು ನಾಯಕರ ಕುಮ್ಮಕ್ಕಿರುವ ಕಾರಣಕ್ಕೆ ಇಂತಹ ದೈರ್ಯ ಬರುತ್ತೆ.
ಇದು ಕಾಂಗ್ರೆಸ್ ಸರ್ಕಾರದ ಮೇಲಿನ ದಾಳಿ, ಸಿಎಂ ಸಂವಿಧಾನ, ರೂಲ್ ಆಫ್ ಲಾ ಅಂತಾರೆ, ಈಗ ರೂಲ್ ಆಫ್ ಲಾ ಮೇಲೆ ಕ್ರಮ ತೆಗೆದುಕೊಳ್ತಾರ. ಅಥಾವ ತುಷ್ಠಿಕರಣ ರಾಜಕೀಯ ಮಾಡ್ತಾರ ನೋಡಬೇಕು ಎಂದು ಹೇಳಿದರು.