ಮೈಸೂರು: ವ್ಯಕ್ತಿಯೋರ್ವ ಅನ್ಯಧರ್ಮಿಯರ ಬಗ್ಗೆ ಅವಹೇಳನಕಾರಿಯಾದ ಪೋಸ್ಟ್ ಮಾಡಿದ್ದ ಕಾರಣಕ್ಕೆ ಯದಯಗಿರಿ ಉದ್ವಿಗ್ನವಾಗಿದ್ದು. ಈ ಕುರಿತು ಮಾತನಾಡಿದ ಸಹಕಾರ ಸಚಿವ ರಾಜಣ್ಣ ಪೊಲೀಸರ ಮೇಲೆ ಗರಂ ಆಗಿದ್ದಾರೆ. ಉದಯಗಿರಿ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶ, ಅಲ್ಲಿರುವ ಠಾಣೆಯಲ್ಲಿ ಆತನನ್ನು ಏಕೆ ಇಡಬೇಕು ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ :2047ಕ್ಕೆ ಈ ದೇಶವನ್ನು ಇಸ್ಲಾಂ ದೇಶವನ್ನಾಗಿ ಮಾಡಲು ಮುಂದಾಗಿದ್ದಾರೆ : ಪ್ರಮೋದ್ ಮುತಾಲಿಕ್
ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ರಾಜಣ್ಣ ‘ಈ ಪೊಲೀಸರಿಗೆ ಏನಾಗಿದೆ..? ಮಿನಿಮಮ್ ಕಾಮನ್ ಸೆನ್ಸ್ ಬೇಡ್ವಾ..? ಯಾರೋ ಆರ್ಎಸ್ಎಸ್ ಅವನು ಕೃತ್ಯ ಮಾಡಿದ್ದಾನೆ, ಅವನ ಮೇಲೆ ಕೇಸ್ ಆಗಿದೆ, ಆರೆಸ್ಟ್ ಆಗಿದ್ದಾನೆ. ಆದರೆ ಪೊಲೀಸರು ಏಕೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಇಟ್ಟರು?, ಉದಯಗಿರಿ ಮುಸ್ಲಿಂ ಬಾಹುಳ್ಯ ಏರಿಯಾ..! ಅಲ್ಲೇ ಆರೋಪಿಯನ್ನ ಏಕೆ ಇಡಬೇಕಿತ್ತು, ಈ ಪೊಲೀಸವರಿಗೆ ಬುದ್ಧಿ ಬೇಡ್ವಾ.!? ಸರ್ಕಾರದಲ್ಲಿ ನಾವಷ್ಟೇ ಅಲ್ಲ ಅಧಿಕಾರಿಗಳು ಸರಿಯಾದ ನಿರ್ಧಾರ ಮಾಡಬೇಕು ಎಂದು ಉದಯ ಗಿರಿ ಪೊಲೀಸರ ಕಾರ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಅಧಿಕಾರಿಗೆ ನಿಂದನೆ ಕುರಿತು ರಾಜಣ್ಣ ಮಾತು !
ಭದ್ರಾವತಿ ಶಾಸಕ ಸಂಗಮೇಶ ಪುತ್ರನಿಂದ ಮಹಿಳಾ ಅಧಿಕಾರಿಗೆ ನಿಂದನೆ ಆರೋಪದ ಕುರಿತು ಮಾತನಾಡಿದ ಸಚಿವ ಕೆ.ಎನ್.ರಾಜಣ್ಣ ‘ಯಾರೇ ಆಗಲಿ ಅಧಿಕಾರಿಗಳ ವಿರುದ್ಧ ಹಾಗೆ ಮಾತನಾಡಬಾರದು, ಕಾನೂನು ಪ್ರಕಾರ ಶಿಕ್ಷೆ ಆಗಲೇಬೇಕು. ಮಿನಿಸ್ಟರ್ ಆಗಲೀ, ಶಾಸಕ ಆಗಲೀ, ಶಾಸಕನ ಮಗ ಆಗಲೀ ಯಾರೂ ಹಾಗೆ ಮಾತನಾಡಬಾರದು. ಹಾಗೆ ಮಾತನಾಡೋರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು ಎಂದು ಹೇಳಿದರು.