Tuesday, February 11, 2025

ಸರಸ್ವತಿ ಪೂಜೆ ವೇಳೆ ತಂದೆ-ತಾಯಿಯರ ಪಾದ ಪೂಜೆ ಮಾಡಿದ ಶಾಲಾ ಮಕ್ಕಳು

ಹಾವೇರಿ: ಆಧುನೀಕರಣ ಜಾಗತೀಕರಣ ಮತ್ತು ನಗರೀಕರಣದ ಈ ದಿನಗಳಲ್ಲಿ ಹೆತ್ತವರ ಮೇಲೆ ಮಕ್ಕಳ ಗೌರವ ಕಡಿಮೆಯಾಗುತ್ತಿದೆ. ಪೂಜ್ಯನೀಯವಾಗಿ ಕಾಣಬೇಕಾದ ಈ ಜೀವಗಳನ್ನು ಸ್ವಂತ ಮಕ್ಕಳೇ ವೃದ್ದಾಶ್ರಮಕ್ಕೆ ತಳ್ಳುತ್ತಿರುವುದು ನಿಜಕ್ಕೂ ಆಘಾತಕಾರಿ.

ಈಗಾಗಿ ಮಕ್ಕಳಲ್ಲಿ ತಂದೆ ತಾಯಿಗಳ ಬಗ್ಗೆ ಪೂಜ್ಯನಿಯ ಭಾವನೆ ಮೂಡುವ ನಿಟ್ಟಿನಲ್ಲಿ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ. ಏಳನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಹಾಗೂ ಮಹಾ ಸರಸ್ವತಿ ಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ತಮ್ಮ ತಾಯಿ ತಂದೆಯರ ಪಾದ ಪೂಜೆ ಮಾಡಿ ಮಕ್ಕಳಿಗೆ ತಂದೆ ತಾಯಿಗಳ ಮಹತ್ವ ತಿಳಿಸಿದರು. ಏಳನೇ ತರಗತಿಯ ಮಕ್ಕಳ 50ಕ್ಕೂ ಅಧಿಕ ತಂದೆ ತಾಯಿಯರಿಗೆ ಮಕ್ಕಳು ಪಾದಪೂಜೆ ಮಾಡಿದರು.

ಇದನ್ನೂ ಓದಿ :ಮೊದಲ ಹೆಂಡತಿಯನ್ನು ಅರ್ಧದಲ್ಲಿಯೆ ಬಿಟ್ಟು ಹೋದ ಮೌಲ್ವಿ.

ಪಾದಪೂಜೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ತಂದೆ ತಾಯಿಯರು ಹೊಸ ಹೊಸ ಬಟ್ಟೆ ತೊಟ್ಟು ಶಾಲೆಗೆ ಆಗಮಿಸಿದ್ದರು. ಶಾಲೆಯ ಮಕ್ಕಳು ಸಹ ಹೊಸ ಹೊಸ ಉಡುಗೆ ತೊಟ್ಟು ಹಬ್ಬದ ಆಚರಣೆ ರೀತಿಯಲ್ಲಿ ಶಾಲೆಗೆ ಆಗಮಿಸಿದ್ದರು. ಶಾಲೆಯ ಮೈದಾನದಲ್ಲಿ ಎಲ್ಲಾ ಮಕ್ಕಳ ತಂದೆ ತಾಯಿಗಳನ್ನು ಕುರ್ಚಿಗಳ ಮೇಲೆ ಸಾಲಾಗಿ ಕೂರಿಸಿ ಮಕ್ಕಳು ತಮ್ಮ ತಮ್ಮ ತಂದೆ ತಾಯಿಯರ ಪಾದ ಪೂಜೆ ಮಾಡಿದರು. ತಂದೆ ತಾಯಿಯರ ಕೈಗೆ ಹೂವಿನಿಂದ ಕಂಕಣ ಕಟ್ಟಿ, ತಟ್ಟೆಯಲ್ಲಿ ತಂದೆ ತಾಯಿಯರ ಪಾದಗಳನ್ನಿರಿಸಿ ತೊಳೆದು ತಂದೆ ತಾಯಿಯರ ಪಾದಗಳಿಗೆ ಪೂಜೆ ಸಲ್ಲಿಸಿದರು.

RELATED ARTICLES

Related Articles

TRENDING ARTICLES