Tuesday, February 11, 2025

ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಗೃಹಿಣಿ ಆತ್ಮಹ*ತ್ಯೆ !

ಮಂಡ್ಯ : ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತ ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದ್ದು. ಮೃತ ಮಹಿಳೆಯನ್ನು ದಿವ್ಯ ಎಂದು ಗುರುತಿಸಲಾಗಿದೆ. ಮೃತ ಮಹಿಳೆಯ ಕುಟುಂಬಸ್ಥರು ಗಂಡ ಗಿರೀಶ್​ ಹೊಡೆದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಮಂಡ್ಯದ, ಮದ್ದೂರಿನ ಕೆಸ್ತೂರಿನಲ್ಲಿ ಘಟನೆ ನಡೆದಿದೆ. ಮಾಚಳ್ಳಿ ಗ್ರಾಮದ ಗಿರೀಶ್​ ಜೊತೆ ದಿವ್ಯ 2016ರಲ್ಲಿ ಮದುವೆಯಾಗಿದ್ದರು. ಇಬ್ಬರು ಸೇರಿ ಕೆಸ್ತೂರಿನಲ್ಲಿ ಜಿಮ್​ ನಡೆಸುತ್ತಿದ್ದರು. ಆದರೆ ಇಂದು ಅದೇ ಜಿಮ್​ನಲ್ಲಿ ದಿವ್ಯ ಶವವಾಗಿ ಪತ್ತೆಯಾಗಿದ್ದು. ಗಂಡ ಗಿರೀಶ್​ ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ :ಮದುವೆ ಸಂಭ್ರಮದಲ್ಲಿ ಕುಣಿಯುತ್ತಿದ್ದ ಯುವತಿ ಹೃದಯಘಾತದಿಂದ ಕುಸಿದು ಬಿದ್ದು ಸಾ*ವು

ಇತ್ತೀಚೆಗೆ ಗಿರೀಶ್​ಗೆ ಮಹಿಳೆಯೊಬ್ಬರು ಜೊತೆ ಅಕ್ರಮ ಸಂಬಂಧವಿತ್ತು ದಿವ್ಯ ಕುಟುಂಬಸ್ಥರು ಆರೋಪಿಸಿದ್ದರು. ಇದೇ ವಿಚಾರಕ್ಕೆ ಕಳೆದ ಮೂರು ತಿಂಗಳ ಹಿಂದೆ ನ್ಯಾಯ ಪಂಚಾಯಿತಿ ನಡೆಸಿ ಗಂಡ ಹೆಂಡತಿಯನ್ನು ಒಂದು ಮಾಡಿದ್ದರು. ಆದರೆ ಇಂದು ದಿವ್ಯ ಜಿಮ್​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು. ದಿವ್ಯ ಕುಟುಂಬಸ್ಥರು ಗಿರೀಶ್​ ಹೊಡೆದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಕೆಸ್ತೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES